
ಯಲ್ಲಾಪುರ: ಅಂಕೋಲಾ – ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತ ವೀಕ್ಷಣೆಗೆ ಹುಬ್ಬಳ್ಳಿಯಿಂದ ಮೂರು ಬೈಕಿನಲ್ಲಿ ಬಂದ ಆರು ಪ್ರವಾಸಿಗರು ಇನ್ನೂ ಫಾಲ್ಸ್ ನಿಂದ ಮರಳಿ ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ.
ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ಅಲ್ಲಿರುವ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗರ ಹುಡುಕಾಟದಲ್ಲಿ ನಿರತರಾಗಿದ್ದು ಈ ತನಕ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರ ಬೈಕ್ ಗಳು ಹುಬ್ಬಳ್ಳಿಯ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿವೆ ಎಂದು ಯಲ್ಲಾಪುರ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.