ರಾಜ್ಯ
ಕೊಂಕಣ್ ರೈಲು ಮಾರ್ಗದಲ್ಲಿ ರೈಲು ಪುನರಾರಂಭ

ಮುಂಬೈ: ಜಡಿಮಳೆ ಹಾಗೂ ಪ್ರವಾಹದ ಕಾರಣ ಕೊಂಕಣ ರೈಲು ಮಾರ್ಗದಲ್ಲಿ ಸ್ಥಗಿತಗೊಳಿಸಲಾಗಿದ್ದ ರೈಲು ಸೇವೆ ಪುನರಾರಂಭ ಮಾಡಲಾಗಿದೆ.
ಗುಡ್ಡ ಕುಸಿತ ಹಾಗೂ ಹಳಿಗಳ ಮೇಲೆ ನೀರು ನಿಂತ ಕಾರಣ ಮುನ್ನೆಚ್ಚರಿಕೆಯಾಗಿ ರೈಲು ಸೇವೆ ತಡೆಹಿಡಿಯಲಾಗಿತ್ತು.ಈ ಮಧ್ಯೆ ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ
ಬೆಳಗಾವಿಯಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಘಟಪ್ರಭೆ ಮತ್ತು ಕೃಷ್ಣಾ ನದಿ ವ್ಯಾಪ್ತಿಯ ನಾಲ್ಕು ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ,
ನಾಳೆ ಪ್ರವಾಹ ಪೀಡಿತ ಬೆಳಗಾವಿಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ .