ಬಜಾಜ್ ಚೇತಕ್ : ಮತ್ತೆ ಮಾರ್ಕೆಟ್ ಗೆ ಲಗ್ಗೆ ಇಡಲು ಸಜ್ಜಾಗಿದೆ ಭರ್ಜರಿಯಾಗಿ ನಡೀತಿದೆ ಬುಕ್ಕಿಂಗ್

ಬಜಾಜ್ ಕಂಪೆನಿಯು ತನ್ನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿದ್ದ ಜನಪ್ರಿಯ ಬಜಾಜ್ ಚೇತಕ್ನ್ನು ಎಲೆಕ್ಟ್ರಿಕ್ ಮಾಡೆಲ್ನಲ್ಲಿ ಇತ್ತೀಚೆಗೆ ರಿ ಲಾಂಚ್ ಮಾಡಿದ್ದಾರೆ .
ಇದಾಗ್ಯೂ ಇ-ಸ್ಕೂಟರ್ ಕೆಲ ನಗರಗಳಿಗೆ ಸೀಮಿತವಾಗಿತ್ತು.
ಆದರೆ ಇದೀಗ ಕಂಪನಿಯು ಮೂರು ಹೊಸ ನಗರಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ನ ಬುಕ್ಕಿಂಗ್ ಆರಂಭಿಸಿದೆ. ಇವುಗಳಲ್ಲಿ ಮೈಸೂರು, ಮಂಗಳೂರು ಮತ್ತು ಔರಂಗಾಬಾದ್ ಸೇರಿವೆ. ಅಂದರೆ ನೀವು ಈ ಮೂರು ನಗರಗಳಲ್ಲಿದ್ದರೆ, ಬಜಾಜ್ ಇ-ಸ್ಕೂಟರ್ ಅನ್ನು ಕಂಪೆನಿಯ ಅಧಿಕೃತ ವೆಬ್ಸೈಟ್ ಮೂಲಕ ಬುಕ್ ಮಾಡಬಹುದು.
ಬಜಾಜ್ ಆಟೋಮೊಬೈಲ್ಸ್ 2022 ರ ವೇಳೆಗೆ ಬಜಾಜ್ ಚೇತಕ್ ಸ್ಕೂಟರ್ನ ಡೆಲಿವರಿಯನ್ನು 22 ಭಾರತೀಯ ನಗರಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ನ್ನು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಲಾಗುವುದು ತಿಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ಗಳಾದ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್ ಮತ್ತು ಓಲಾ ಇ-ಸ್ಕೂಟರ್ ಜೊತೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಭರ್ಜರಿ ಸ್ಪರ್ಧೆಯೊಡ್ಡುವ ನಿರೀಕ್ಷೆಯಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಪ್ರಮುಖ ನಗರಗಳಲ್ಲಿ ಬುಕ್ಕಿಂಗ್ ಆರಂಭಿಸುತ್ತಿರುವುದು ವಿಶೇಷ.
ಸದ್ಯ ಈ ಸ್ಕೂಟರ್ ಎರಡು ಮಾದರಿಗಳಲ್ಲಿ ಲಭ್ಯವಿದೆ. ಗ್ರಾಹಕರು ಎಂಟ್ರಿ-ಲೆವೆಲ್ ಅರ್ಬನ್ ಮಾಡೆಲ್ ಮತ್ತು ಟಾಪ್-ಎಂಡ್ ಪ್ರೀಮಿಯಂ ಮಾಡೆಲ್ಗಳಲ್ಲಿ ಬುಕ್ ಮಾಡಿಕೊಳ್ಳಬಹುದು.
ಒಂದೂವರೆ ಲಕ್ಷದಲ್ಲಿ ಉತ್ತಮ ಇಕಾನಮಿ ಇರುವ ಗಾಡಿಯನ್ನು ನೀವು ಖರೀದಿಸುವುದಾದರೆ ಚೇತಕ್ ನಿಮ್ಮ ಆಯ್ಕೆಯಾಗಬಹುದು. ಉತ್ತಮ ಬ್ಯಾಟರಿ ಬಾಕ್ ಅಪ್ ಜೊತೆ 90 ಕಿ.ಮೀ ಮೈಲೇಜ್ ಅನ್ನು ಕಂಪನಿ ಗ್ಯಾರಂಟಿ ನೀಡಿದೆ.