ಆಗಸ್ಟ್ 15 ರಿಂದ ಈ ರಾಜ್ಯದಲ್ಲಿ ದೊರೆಯಲಿದೆ ಉಚಿತ ವೈಫೈ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಉಡುಗೊರೆಗೆ ಫುಲ್ ಪ್ಲಾನ್ ರೆಡಿ !

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಜನರಿಗೆ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಆಗಸ್ಟ್ 15 ರಿಂದ ರಾಜ್ಯದ 217 ಪಟ್ಟಣಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡಲು ಸರ್ಕಾರ ತಯಾರಿ ನಡೆಸಿದೆ. ಈ ಯೋಜನೆಯಲ್ಲಿ 17 ಮುನ್ಸಿಪಾಲ್ ಕಾರ್ಪೊರೇಷನ್ ಸೇರಿದಂತೆ 75 ಜಿಲ್ಲಾ ಕೇಂದ್ರಗಳು ಒಳಗೊಂಡಿವೆ. ಸಿಎಂ ರವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ಉಚಿತ ವೈಫೈ ನೀಡುವ ಯೋಜನೆಯನ್ನು ಉದ್ಘಾಟಿಸಿದ್ದಾರೆ. ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಪುರಸಭೆ ಆಯುಕ್ತರಿಗೆ ಈಗಾಗಲೇ ಸೂಚನೆ ರವಾನೆ ಆಗಿದ್ದು, ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ವೈಫೈ ಸೌಲಭ್ಯ ನೀಡಲು ಹಾಟ್ಸ್ಪಾಟ್ ಗುರುತು ಮಾಡುವಂತೆ ಹೇಳಲಾಗಿದೆ.
ಆಗಸ್ಟ್ 15 ರಿಂದ ಉತ್ತರ ಪ್ರದೇಶದ ಪ್ರತಿ ಪಟ್ಟಣದ ಬಸ್ ನಿಲ್ದಾಣ, ರೈಲು ನಿಲ್ದಾಣ, ತಾಲೂಕು ಕಚೇರಿ, ನ್ಯಾಯಾಲಯ, ಬ್ಲಾಕ್ ಆಫೀಸ್, ರಿಜಿಸ್ಟ್ರಾರ್ ಆಫೀಸ್ ಮತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ಉಚಿತ ಸೌಲಭ್ಯ ದೊರೆಯಲಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಸಿದಂತೆ ಉಚಿತ ವೈಫೈ ಸೌಲಭ್ಯ ನೀಡಿ ಭರವಸೆ ಉಳಿಸಿಕೊಂಡಿದೆ.
ಯೋಗಿ ಆದಿತ್ಯನಾತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಾಜಧಾನಿ ಲಖನೌ ಸೇರಿದಂತೆ ಪ್ರಮುಖ ನಗರಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ನೀಡಿದ್ದರು. ಇದೀಗ ಅದೇ ರೀತಿಯಲ್ಲಿ ಜಿಲ್ಲಾ ಕೇಂದ್ರಗಳು, ಮುನ್ಸಿಪಲ್ ಕೌನ್ಸಿಲ್ಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ಗಳಲ್ಲಿ ಉಚಿತ ವೈಫೈ ನೀಡಲು ಸಜ್ಜಾಗಿದೆ ಎಂಬುದು ಖುಷಿಯ ವಿಚಾರವಾಗಿದೆ.