
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಎಂದೇ ಜನಪ್ರಿಯರಾಗಿದ್ದ ಜಯಂತಿ(76) ಕೊನೆಯುಸಿರೆಳೆದಿದ್ದಾರೆ. ಜಯಂತಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದರು.
1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ತಾರೆ ಜಯಂತಿ ಇಂದು ಮುಂಜಾನೆ ನಿಧನ ಹೊಂದಿದ್ದಾರೆ.
ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರೋಧ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಜಯಂತಿ ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಪ್ರತೀ ಕನ್ನಡಿಗರ ಮನೆ ಮಗಳಾಗಿದ್ದ ಜಯಂತಿ ಎಡಕಲ್ಲು ಗುಡ್ಡ ಸಿನೇಮಾದ ಮೂಲಕ ಮನೆಮಾತಾಗಿದ್ದರು.
ದೀರ್ಘ ಕಾಲದ ಅನಾರೋಗ್ಯದಿಂದ ಜಯಂತಿ ಬಳಲುತ್ತಿದ್ದರು. ಚಿತ್ರರಂಗದ ಬರುವ ಮೊದಲು ಜಯಂತಿ ಅವರ ಮೂಲ ಹೆಸರು ಕಮಲಾ ಎಂದಾಗಿತ್ತು.
ಎವರ್ಗ್ರೀನ್ ಹೀರೋಯಿನ್ ಜಯಂತಿಯವರ ನಿಧನ ಕನ್ನಡ ಸಿನಿಲೋಕಕ್ಕೆ ತುಂಬಲಾರದ ನಷ್ಟವಾಗಿದೆ.