ಕರಾವಳಿ
ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಕೊರೋನಾ ಜಾಗೃತಿ ಹಾಗೂ ರೋಗ ನಿರ್ಮೂಲನಾ ಕಾರ್ಯಕ್ರಮ.

ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಕೊರೋನಾ ಜಾಗೃತಿ ಹಾಗೂ ರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಉಪ್ಪೂರು ಸಾಲ್ಮರ ಸಮೀಪದ ಸ್ಪಂದನ ವಿಶೇಷ ಮಕ್ಕಳ ವಸತಿ ನಿಲಯಕ್ಕೆ ದಿನ ಬಳಕೆಗೆ ಬೇಕಾಗುವ ಸ್ವಚ್ಚತಾ ಸಾಮಾಗ್ರಿಗಳು, ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳ ಕಿಟ್ ವಿತರಿಸಲಾಯಿತು. ರೋಟರಿ ವಲಯ 3ರ ಸಹಾಯಕ ಗವರ್ನರ್ ರೋ. ಪದ್ಮನಾಭ ಕಾಂಚನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಲ್ಯಾಣಪುರ ರೋಟರಿ ಕ್ಲಬ್ಬಿನ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು. ವಲಯ ಸೇನಾನಿ ರೋ. ಬ್ರಾಯನ್ ಡಿಸೋಜ, ಅಧ್ಯಕ್ಷ ರೋ. ಶಂಭು ಶಂಕರ್, ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಯೋಜನಾ ಅಧ್ಯಕ್ಷ ಎಮ್ ಮಹೇಶ್ ಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.