ರಾಜ್ಯ
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ 3 ಉಪ ಮುಖ್ಯಮಂತ್ರಿಗಳು!

ಬೆಂಗಳೂರು: ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆಯಾದ ಬೆನ್ನಲ್ಲೇ ಮೂವರು ಡಿಸಿಎಂಗಳನ್ನೂ ನೇಮಕ ಮಾಡಲಾಗಿದೆ.
ಮಾಜಿ ಸಚಿವರಾದ ಆರ್. ಅಶೋಕ್, ಶ್ರೀರಾಮುಲು ಹಾಗೂ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಲಾಗಿದೆ.
ಅದರಂತೆ ನಾಳೆ ಮಧ್ಯಾಹ್ನ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ವೇಳೆ ಮೂವರು ಡಿಸಿಎಂಗಳು ಕೂಡ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.