ಆರೂರು ಗ್ರಾಮದಲ್ಲಿ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಸಾಮಾಜಿಕ ಕ್ಷೇತ್ರದ ಗಣ್ಯರಿಂದ ಚಾಲನೆ

ಹಡಿಲು ಭೂಮಿ ಕೃಷಿ ಅಂದೋಲನ ದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಮಾರು ಭಾಗದಲ್ಲಿ ಇಂದು ದಿನಾಂಕ 28-07-2021 ರಂದು ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಸಾಮಾಜಿಕ ಕ್ಷೇತ್ರದ ಗಣ್ಯರಿಂದ ಚಾಲನೆ ನೀಡಲಾಯಿತು.
ಶ್ರೀ ದಿನೇಶ್ ಚಂದ್ರ, ಆನಂದ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕರು ಪ್ರಕೃತಿ ಲೈಫ್ ಸೈನ್ಸ್ ಪ್ರೈ.ಲಿ ಹಾಗೂ ಆರೂರು ಶ್ರೀಧರ್ ವಿ. ಶೆಟ್ಟಿ ಶ್ರೀ ವಿಷ್ಣುಮೂರ್ತಿ ಫ್ಯೂಯೆಲ್ಸ್ & ಸರ್ವಿಸಸ್ ಆರೂರು, ಕುಂಜಾಲು ಇವರು ಭೂ ಮಾತೆಗೆ ಹಾಲನ್ನು ಅರ್ಪಿಸಿ ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಶೆಟ್ಟಿ, ಉಪಾಧ್ಯಕ್ಷರಾದ ಗುರುರಾಜ್ ರಾವ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಳಿನಿ ಪ್ರದೀಪ್ ರಾವ್, ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜೀವ್ ಕುಲಾಲ್, ಮಾಜಿ ಉಪಾಧ್ಯಕ್ಷ ಗಣೇಶ್ ಕುಲಾಲ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್ ಹಾಗೂ ಆರೂರು ಗ್ರಾಮ ಪಂಚಾಯತ್ ಸದಸ್ಯರು, ಭೂ ಮಾಲಕರು, ಸ್ಥಳೀಯ ಕೃಷಿಕರು, ಪ್ರಮುಖರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.