
ಲಕ್ನೋ: ಉತ್ತರಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ೧೮ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರಪ್ರದೇಶದ ಕೋಟ್ ವಾಲಿ ರಾಮ್ ಸನೇಹಿಘಾಟ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ತಾಂತ್ರಿಕ ದೋಷ ಕಂಡು ಬಂದ ಡಬ್ಬಲ್ ಡೆಕ್ಕರ್ ಬಸ್ ನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ವೇಗವಾಗಿ ಬಂದ ಟ್ರಕ್ ಡಬ್ಬಲ್ ಡೆಕ್ಕರ್ ಬಸ್ ಗೆ ಡಿಕ್ಕಿ ಹೊಡೆದಿದೆ.
ಬಸ್ ನ ಆಕ್ಸಲ್ ತುಂಡಾದ ಪರಿಣಾಮ ಕೆಲವು ಪ್ರಯಾಣಿಕರು ಬಸ್ ನಿಂದ ಕೆಳಗಿಳಿದ ಕಾರಣ ಅವರ ಪ್ರಾಣ ಉಳಿದಿದೆ. ಇನ್ನು ಕೆಲವು ಪ್ರಯಾಣಿಕರು ಬಸ್ ನಲ್ಲಿ ನಿದ್ದೆಗೆ ಶರಣಾಗಿದ್ದರು.
ಅಪಘಾತದಲ್ಲಿ ೨೩ ಮಂದಿ ಗಾಯಗೊಂಡಿದ್ದಾರೆ. ಬಸ್ ಪಂಜಾಬಿನ ಲುಧಿಯಾನದಿಂದ ಬಿಹಾರಕ್ಕೆ ತೆರಳುತ್ತಿತ್ತು