ಕರಾವಳಿ

ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಬೈಂದೂರು ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ದಿನಾಂಕ 25/07/2021ರ ರವಿವಾರ ಸಂಜೆ ಬೈಂದೂರು ತಾಲ್ಲೂಕು ಕಛೇರಿಯ ಆವರಣದಲ್ಲಿ ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಬೈಂದೂರು ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬೈಂದೂರು ತಹಶಿಲ್ದಾರರಾದ ಶ್ರೀಮತಿ ಶೋಭಾಲಕ್ಷ್ಮಿರವರು ವನಮಹೋತ್ಸವದ ಸಂಕೇತವಾಗಿ ಹಸಿರು ಬಣ್ಣದ ಉಡುಗೆಯಲ್ಲಿ ಆಗಮಿಸಿ ತಾಲ್ಲೂಕು ಕಛೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಸಿ ಗಳನ್ನು ನೆಡುವುದರೊಂದಿಗೆ ಅದರ ಫೋಷಣೆಯು ನಮ್ಮೆಲ್ಲಾರ ಜವಾಬ್ದಾರಿ ಇದರಿಂದ ವಾತವರಣಕ್ಕೆ & ನಮಗೆ ಆಗುವ ಪ್ರಯೋಗಗಳನ್ನು ವಿವರಿಸಿದರು.


ಬೈಂದೂರು ಗೃಹ ರಕ್ಷಕ ದಳದ ಘಟಕಾಧಿಕಾರಿ ಶ್ರೀ ರಾಘವೇಂದ್ರ ಎನ್ ಮಾತಾನಾಡಿ ಮನೆಗೊಂದು ಮಗುವಿರಲಿ
ಮಗುವಿಗೊಂದು ಮರ ಇರಲಿ ಎಂಬ ಧೇಯದೊಂದಿಗೆ ನಮ್ಮ ಈ ಕಾರ್ಯಕ್ರಮವನ್ನು ಹಮ್ಮೀಕೊಂಡಿರುವುದರಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗೃಹ ರಕ್ಷಕ ಸಿಬ್ಬಂದಿ ವರ್ಗದವರಿಗು ತಾಲ್ಲೂಕು ಕಛೇರಿಯ ಸಿಬ್ಬಂದಿ ವರ್ಗದವರಿಗು ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ನೀಡುವಂತೆ ಬೈಂದೂರು ಪೋಲಿಸ್ ಅಪರಾಧ ನಿಗ್ರಹದಳದ ಉಪನೀರಿಕ್ಷಕ ಶ್ರೀ ಅನಿಲ್ ಬಿ ಎಮ್ ರವರಲ್ಲಿ ಕೇಳಿಕೊಂಡರು.

ಈ ಸಂದರ್ಭದಲ್ಲಿ ಉಪತಹಶಿಲ್ದಾರರಾದ ಶ್ರೀ ಭೀಮಪ್ಪ & ತಾಲ್ಲೂಕು ಆಡಳಿತ ಕಛೇರಿಯ ಸಿಬ್ಬಂದಿವರ್ಗದವರು ಬೈಂದೂರು ಗೃಹ ರಕ್ಷಕ ದಳದ ಗೃಹ ರಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker