ರಾಜ್ಯ
ಶನಿವಾರ, ಭಾನುವಾರ ಕೇರಳದಲ್ಲಿ ಕಂಪ್ಲೀಟ್ ಲಾಕ್ ಡೌನ್ ಜಾರಿ.!

ತಿರುವನಂತಪುರಂ: ಹೆಚ್ಚುತ್ತಿರುವ ಕೊರೋನಾ ಪ್ರಕರಣ ಹಿನ್ನೆಲೆಯಲ್ಲಿ ಕೇರಳದಲ್ಲಿ ಎರಡು ದಿನ ಕಂಪ್ಲೀಟ್ ಲಾಕ್ ಡೌನ್ ಘೋಷಿಸಲಾಗಿದೆ.
ಜುಲೈ 31 ಮತ್ತು ಆಗಸ್ಟ್ 1ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ದೇಶದ ಒಟ್ಟು ಕೊರೋನಾ ಪ್ರಕರಣದ ಶೇಕಡ 50 ಕೇರಳದಲ್ಲಿ ವರದಿಯಾಗಿದೆ.
ಈ ಮಧ್ಯೆ ಪರಿಸ್ಥಿತಿಯ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 6 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಕೇರಳಕ್ಕೆ ಕಳುಹಿಸಲಿದೆ.