
ವಾಷಿಂಗ್ಟನ್: ಕೋವಿಡ್ ಲಸಿಕೆ ಪಡೆದ ಜನತೆಗೆ 100 ಡಾಲರ್ (ಸುಮಾರು 7,400ರೂ) ನೀಡುವಂತೆ ರಾಜ್ಯಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕೊರೋನಾ ನಿಯಂತ್ರಣಕ್ಕೆ ಲಸಿಕಾಅಭಿಯಾನವನ್ನು ಹೆಚ್ಚಿಸಲು ಬೈಡನ್ ಹೊಸ ಯೋಜನೆ ಘೋಷಿಸಿದ್ದಾರೆ.
ಹೊಸದಾಗಿ ಲಸಿಕೆ ಪಡೆಯುವವರಿಗಷ್ಟೇ ಪ್ರೋತ್ಸಾಹ ಧನ ನೀಡುವುದರಿಂದ, ಈಗಾಗಲೇ ಲಸಿಕೆ ಪಡೆದವರಿಗೆ ಅನ್ಯಾಯವಾಗಲಿದೆ ಎಂಬುದು ನನ್ನ ಗಮನದಲ್ಲಿದೆ. ಆದರೆ ಸೋಂಕನ್ನು ನಿಯಂತ್ರಿಸಲು ಈ ಯೋಜನೆ ಅನುಕೂಲವಾಗಬಹುದು ಎಂದರೆ ಜಾರಿಗೆ ತರಬಹುದು ಎಂದಿದ್ದಾರೆ ಎಂದು ವರದಿ ತಿಳಿಸಿದೆ.