ರಾಷ್ಟ್ರೀಯ

ಆಗಸ್ಟ್ 31ರ ತನಕ ಅಂತಾರಾಷ್ಟ್ರೀಯ ವಿಮಾನ ಯಾನ ನಿರ್ಬಂಧ ವಿಸ್ತರಣೆ!

ನವದೆಹಲಿ: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಅಂತಾರಾಷ್ಟ್ರೀಯ ವಿಮಾನ ಯಾನ ಸೇವೆ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಆಗಸ್ಟ್ 31ರ ತನಕ ನಿರ್ಬಂಧ ಮುಂದುವರಿಸಿ ಕೇಂದ್ರ ನಾಗರಿಕ ವಿಮಾನ ಯಾನ ಇಲಾಖೆ ಆದೇಶ ಹೊರಡಿಸಿದ್ದಾರೆ .

ವಿಶೇಷ ವಿಮಾನಗಳಿಗೆ  ಮಾತ್ರ ಅನುಮತಿ ನೀಡಲಾಗುವುದು. ವಂದೇ ಭಾರತ್ ಮತ್ತು ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ಕೆಲವು ಆಯ್ಜ ರಾಷ್ಟ್ರಗಳಿಗೆ ಮಾತ್ರ ವಿಮಾನ ಯಾನಕ್ಕೆ ಭಾರತ ಅವಕಾಶ ಕಲ್ಪಿಸಿದೆ.

ಕೊರೋನಾ ಮೂರನೆ ಅಲೆ ಭೀತಿ ಪರಿಗಣಿಸಿ ಕೇಂದ್ರ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker