
ಸಜ್ಜನ ಜನಪ್ರತಿನಿಧಿಯಾಗಿ,ಪಕ್ಷಾತೀತವಾಗಿ ಎಲ್ಲರೂ ಒಪ್ಪುವ ಪ್ರಾಮಾಣಿಕರು,ಆದರ್ಶ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಏಳ್ಗೆಯನ್ನು ಸಹಿಸಲಾರದೆ ಅವರ ಮನೆ ನಿರ್ಮಾಣದ ಕುರಿತು ಅಪಾದನೆ ಮಾಡಿದ ಹೀನ ಕೃತ್ಯವನ್ನು ಖಂಡಿಸುತ್ತೇನೆ.
ತನ್ನ ವೈಯಕ್ತಿಕ ವಿಚಾರವಾಗಿ ಖುದ್ದು ಶ್ರೀನಿವಾಸ ಪೂಜಾರಿಯವರೆ ಲೋಕಾಯುಕ್ತ ದೂರು ದಾಖಲಿಸಿ ತಾನೆಷ್ಟು ಶುದ್ಧಹಸ್ತ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ, ಸಂಘಸಂಸ್ಥೆಗಳು,ಹಾಗೂ ಜನಸಾಮಾನ್ಯರು ಶ್ರೀನಿವಾಸ ಪೂಜಾರಿಯವರ ಪರವಾಗಿರುವುದು ಸ್ಪಷ್ಟ ಮತ್ತು ಅರ್ಥಪೂರ್ಣ.
ಒಬ್ಬ ನಿಷ್ಠಾವಂತರಿಗೆ ತೇಜೋವಧೆಯಾಗುತ್ತಿರುವಾಗ ಮಾನ್ಯ ಸಂಸದರಾಗಲಿ,ಜಿಲ್ಲೆಯ ಶಾಸಕರಾಗಲಿ ಮೌನವಾಗಿರುವುದು ಏಕೆ ?
ಈ ತರಹದ ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವ ಕೀಳು ಮಟ್ಟದ ರಾಜಕೀಯ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವವೇದಿಕೆ (ರಿ) ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಅವರು ತಿಳಿಸಿದ್ದಾರೆ.
https://www.facebook.com/102187664802912/posts/356691332685876/