ರಾಜ್ಯ
ಸುಬ್ರಹ್ಮಣ್ಯ :ಜಾಗದ ಬಗೆಗೆ ವಗ್ವಾದ ಕತ್ತಿಯಿಂದಲೇ ಹಲ್ಲೆ!!

ಸುಬ್ರಹ್ಮಣ್ಯ: ಆಸ್ತಿ ಕಲಹದ ಹಿನ್ನಲೆ ವ್ಯಕ್ತಿ ಇಬ್ಬರ ನಡುವೆ ವಾಗ್ವಾದ ನಡೆದು ತಾರಕಕ್ಕೇರಿ ಕತ್ತಯಿಂದ ಹಲ್ಲೆ ನಡೆಸಿದ ಘಟನೆ ಕಲ್ಮಾಕರ್ ಎಂಬಲ್ಲಿ ನಡೆದಿದೆ. ಜಾಗದ ಬಗ್ಗೆ ಬಿಸಿ ಬಿಸಿ ವಾಗ್ವಾದ ಪರಸ್ಪರ ಇಬ್ಬರ ನಡುವೆ ನಡೆದಿದೆ. ಬಳಿಕ ಚರ್ಚೆ ಜೋರಾಗಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ
ಈ ಘಟನೆ ಕಲ್ಮಕಾರು ಕಾರುಗೋಡು ನಿವಾಸಿಯಾದ ಲೋಕಯ್ಯ ಮತ್ತು ಯತೀಶ್ ಎಂಬುವವರ ನಡುವೆ ನಡೆದಿದ್ದು, ಜುಲೈ 30 ರಂದು ಕತ್ತಿಯಿಂದ ಹಲ್ಲೆ ಮಾಡಿರುವ ಬಗ್ಗೆ ಆರೋಪವಾಗಿದೆ. ಹಲ್ಲೆಯಿಂದ ಗಾಯಗೊಂಡ ಯತೀಶ್‌ರವರಿಗೆ ಭುಜದ ಭಾಗಕ್ಕೆ ಪೆಟ್ಟು ಬಿದ್ದಿದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ .