ರಾಷ್ಟ್ರೀಯ
ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು..

ತಿರುವನಂತಪುರಂ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಸೌದಿ ಅರೇಬಿಯಗೆ ಹೊರಟಿದ್ದ ವಿಮಾನ ತುರ್ತು ಭೂ ಸ್ಪರ್ಶಮಾಡಿದೆ. ವಿಮಾನ ಟೆಕ್ ಆಫ್ ಆದ ಒಂದು ಗಂಟೆಯೊಳಗೆ ಹಿಂತಿರುಗಿದೆ.
ವಿಮಾನದಲ್ಲಿ ಯಾವುದೇ ಪ್ರಯಾಣಿಕರಿಲಿಲ್ಲ, ಸರಕನ್ನು ಸಾಗಿಸಲಾಗುತ್ತಿತ್ತು. ಟೇಕ್ ಆಫ್‌ಗಿಂತ ಮುನ್ನ ವಿಮಾನ ಪರಿಶೀಲನೆ ನಡೆಸಿದಾಗ, ಯಾವುದೇ ಬಿರುಕುಗಳಿರಲಿಲ್ಲ. ಟೇಕ್ ಆಫ್ ವೇಳೆ ಈ ಬಿರುಕು ಉಂಟಾಗಿರಬಹುದು ಎಂದು ತಿರುವನಂತಪುರ ವಿಮಾನ ನಿಲ್ದಾಣದ ನಿರ್ದೇಶಕ ಸಿ.ವಿ. ರವೀಂದ್ರನ್ ಹೇಳಿದ್ದಾರೆ.
ಪೈಲೆಟ್ ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.