ಅಂತಾರಾಷ್ಟ್ರೀಯ
ಕಂದಹಾರ್ ವಿಮಾನ ನಿಲ್ದಾಣದ ಮೇಲೆ 3 ರಾಕೆಟ್ಗಳ ದಾಳಿ.!

ಕಂದಹಾರ್: ಅಪ್ಘಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ. ಮೂರು ರಾಕೆಟ್ ಗಳು ವಿಮಾನ ನಿಲ್ದಾಣದ ಆವರಣಕ್ಕೆ ಅಪ್ಪಳಿಸಿವೆ ಎಂದು ವರದಿಯಾಗಿದೆ.
ಅಪ್ಘಾನಿಸ್ತಾನದಲ್ಲಿ ಹೆಚ್ಚಿನ ಭೂ ಪ್ರದೇಶದ ಮೇಲೆ ನಿಯಂತ್ರಣ ಸ್ಥಾಪಿಸಲು ಹೊರಟಿರುವ ತಾಲಿಬಾನ್ ಉಗ್ರರು ಈ ರಾಕೆಟ್ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಭಾರತದ ವಿಮಾನವನ್ನು ಅಪಹರಿಸಿದ್ದ ಉಗ್ರರು ಅದನ್ನು ಕಂದಹಾರ್ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು.