ಅಂತಾರಾಷ್ಟ್ರೀಯ
90 ಪೈಸೆಯ ಚಮಚ 2 ಲಕ್ಷ ರೂ.ಗೆ ಹರಾಜಿನಲ್ಲಿ ಮಾರಾಟವಾಗಿದೆ ..!

ಲಂಡನ್: 90 ಪೈಸೆಗೆ ಖರೀದಿಸಿದ ಚಮಚವೊಂದು ಹರಾಜಿನಲ್ಲಿ 2ಲಕ್ಷರೂ. ಗೆ ಮಾರಾಟವಾಗಿದೆ.
ವ್ಯಕ್ತಿಯೊಬ್ಬರು ಲಂಡನ್ನ ಬೀದಿಯಲ್ಲಿ ಸೊಟ್ಟಗಾದ ಹಳೇ ಸ್ಪೂನ್ ಒಂದನ್ನು 90 ಪೈಸೆಗೆ ಖರೀದಿಸಿದ್ದರು.
ಖರೀದಿಸಿದ ವ್ಯಕ್ತಿಗೇ ಚಮಚ ವಿಚಿತ್ರವಾಗಿ ಕಂಡು ಆನ್ಲೈನ್ ನಲ್ಲಿ ಹರಾಜಿಗಿಡಲು ನಿರ್ಧರಿಸಿ, ಲಾರೆನ್ಸ್ನ ಹರಾಜುದಾರರನ್ನು ಸಂಪರ್ಕಿಸಿದ್ದನು.
ಈ ವೇಳೆ ಹರಾಜಿನ ತಂಡದಲ್ಲಿದ್ದ ಬೆಳ್ಳಿಯ ಎಕ್ಸ್ಪರ್ಟ್ ಒಬ್ಬರು ಚಮಚ ನೋಡಿ ಇದು ಬೆಳ್ಳಿಯ ಚಮಚ, 13ನೇ ಶತಮಾನದ್ದಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ತಿಳಿದು ಖರೀದಿಸಿದ ವ್ಯಕ್ತಿ ಅದರ ಇತಿಹಾಸದೊಂದಿಗೆ ಆನ್ಲೈನ್ ನಲ್ಲಿ ಹರಾಜಿಗಿಟ್ಟಿದ್ದನು.
ಹರಾಜಿನಲ್ಲಿ ಚಮಚದ ಇತಿಹಾಸ ತಿಳಿದ ಜನ ಪುರಾತನ ವಸ್ತು ಎಂದು ಮುಗಿಬಿದ್ದು ಬಿಡ್ ಮಾಡಿದ್ದು, ಕೊನೆಗೆ 2 ಲಕ್ಷರೂ. ಗೆ ಮಾರಾಟವಾಗಿದೆ.