
ಮೂಲ್ಕಿ: ರೋಟರಿಕ್ಲಬ್‌ನ 2021-22ನೇ ಸಾಲಿನ ರಜತ ವರ್ಷದ ಅಧ್ಯಕ್ಷರಾಗಿ ಮೂಲ್ಕಿ ಪ್ರಮೋದ್ ಎಲೆಕ್ಟಾನಿಕ್ಸ್ ಮತ್ತು ಫರ್ನಿಚರ್ಸ್ ಮಾಲೀಕ ಶಿವರಾಮ ಜಿ.ಅಮೀನ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ರವಿಚಂದ್ರ, ಕೋಶಾಧಿಕಾರಿಯಾಗಿ ರೆಮೆಂಡ್‌ರೆಬೆಲ್ಲೊ, ದಂಡಪಾಣಿಯಾಗಿ ಭುಜಂಗ ಕವತ್ತಾರ್, ಸಂಘ ಸೇವಾ ನಿರ್ದೇಶಕರಾಗಿ ಜಿನರಾಜ್ ಸಿ.ಸಾಲ್ಯಾನ್, ಸಮುದಾಯ ಸೇವಾ ನಿರ್ದೇಶಕರಾಗಿ ಎಂ.ನಾರಾಯಣ, ವೃತ್ತಿಸೇವಾ ನಿರ್ದೇಶಕರಾಗಿ ಜೊವಿನ್ ಪ್ರಕಾಶ್ ಡಿಸೋಜ, ಯುವ ಸೇವಾ ನಿರ್ದೇಶಕರಾಗಿ ಲಿಯಾಖತ್ ಆಲಿ, ಅಂತಾರಾಷ್ಟ್ರೀಯ ಧತ್ತಿನಿಧಿ ಸಭಾಪತಿ ರಾಜಾ ಪತ್ರಾವೋ ಹಾಗೂ ಸಂಸ್ಥೆಯ ಪತ್ರಿಕೆ ‘ಮೂಲಿಕಾ’ ಇದರ ಸಂಪಾದಕರಾಗಿ ಯಶವಂತ್ ಎನ್ ಲ್ಯಾನ್, ನಿಕಟಪೂರ್ವ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.