ರಾಜ್ಯ
ಆಗುಂಬೆ : ಘಾಟ್‌ನಲ್ಲಿ ಬ್ರೇಕ್ ಫೈಲ್ ಆಗಿ ತಡೆಗೋಡೆ ಮೇಲೆ ನಿಂತ ಸರಕು ಸಾಗಣೆ ವಾಹನ : ತಪ್ಪಿದ ಭಾರಿ ಅನಾಹುತ..!

ಆಗುಂಬೆ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಲಾರಿ ಪ್ರಪಾತದತ್ತ ಮುಖ ಮಾಡಿ ನಿಂತಿದೆ. ಅದೃಷ್ಟವಶಾತ್ ದೊಡ್ಡ ಅಪಾಯ ತಪ್ಪಿದಂತಾಗಿದೆ. ಲಾರಿಯ ಬ್ರೇಕ್ ಫೈಲ್ ಈ ಅವಘಡ ಸಂಭವಿಸಲು ಕಾರಣ ಎಂದು ತಿಳಿದುಬಂದಿದೆ.
ಆಗುಂಬೆ ಘಾಟ್ ರಸ್ತೆಯ ೬ ಮತ್ತು ೭ ನೇ ತಿರುವಿನ ಮಧ್ಯೆ ಈ ಘಟನೆ ಸಂಭವಿಸಿದೆ. ಭತ್ತ ತುಂಬಿದ್ದ ಲಾರಿ ಶಿವಮೊಗ್ಗದಿಂದ ಹೆಬ್ರಿಗೆ ತೆರಳುತಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಮುನ್ನುಗ್ಗಿದೆ. ಲಾರಿಯ ಮುಂದಿನ ಚಕ್ರಗಳು ಪ್ರಪಾತದ ಕಡೆಗೆ ಮುಖ ಮಾಡಿವೆ.
ಲಾರಿಯ ಚಾಲಕನ್ನು ರಕ್ಷಣೆ ಮಾಡಲಾಗಿದೆ. ಅಪಘಾತದಿಂದಾಗಿ ಕೆಲಕಾಲ ಘಾಟಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರ ನೆರವಿನಿಂದ ಲಾರಿಯನ್ನು ಎಳೆಯುವ ಕಾರ್ಯ ನಡೆಯುತ್ತಿದೆ.