ರಾಷ್ಟ್ರೀಯ
💥ಇಂಡಿಗೋ ಏರ್ ಲೈನ್ಸ್ ವಿಮಾನ ಟಿಕೆಟ್ ಖರೀದಿಸುವವರಿಗೆ ಬಂಪರ್ ಆಫರ್….!

ನವದೆಹಲಿ: ಇಂಡಿಗೋ ಏರಲೈನ್ಸ್ ೧೫ ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಮಾನ ಪ್ರಯಾಣಿಕರಿಗೆ ಕೇವಲ ೯೧೫ ರೂ.ಗೆ ಟಿಕೆಟ್ ಬುಕ್ ಮಾಡುವ ಅವಕಾಶ ನೀಡಿದೆ.
ಇಂದಿನಿಂದ ಆಗಸ್ಟ್ ೬ ರವರೆಗೆ ಈ ರಿಯಾಯಿತಿ ದರದ ಟಿಕೆಟ್ ಅನ್ನು ಇಂಡಿಗೋ ಮಾರಾಟ ಮಾಡಲಿದ್ದಾರೆ.
೨೦೨೧ ರ ಸೆಪ್ಟೆಂಬರ್ ೧ ಮತ್ತು ೨೦೨೨ರ ಮಾರ್ಚ್ ೨೨ ರವರೆಗೆ ಇಂಡಿಗೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಈ ಟಿಕೆಟ್ ಅನ್ನು ಖರೀದಿಸಬಹುದಾಗಿದೆ.
ಆಫರ್ ಡೊಮೆಸ್ಟಿಕ್ ವಿಮಾನ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದ್ದು, ಪ್ರಯಾಣಿಕರು ಪ್ರಯಾಣಿಸುವ ದೂರ ಹಾಗೂ ಕ್ಲಾಸ್ ಮೇಲೆ ಬೆಲೆಯಲ್ಲೂ ಕೊಂಚ ಬದಲಾವಣೆಯಾಗಲಿದೆ ಎಂದು ಇಂಡಿಗೋ ತಿಳಿಸಿದೆ.
ಏರ್ ಲೈನ್ಸ್ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಇಂಡಿಗೋ ವಿಮಾನದ ಟಿಕೆಟ್ ಬುಕ್ ಮಾಡಿದರೆ ಶೇ. ೫ ರಷ್ಟು ಕ್ಯಾಶ್ಬ್ಯಾಕ್ ಕೂಡ ಸಿಗಲಿದೆ ಎಂದು ಇಂಡಿಗೋ ವಿಮಾನ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.