ಕರಾವಳಿ

ಗುಜ್ಜರ್’ಬೆಟ್ಟು : ಅಂಗಡಿಯ ಶೆಟರ್ ಮುರಿದು ಕಳವು – ಪ್ರಕರಣ ದಾಖಲು

ಮಲ್ಪೆ: ಗುಜ್ಜರ್’ಬೆಟ್ಟಿನ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಕಳವುಗೈದ ಕುರಿತು ವರದಿಯಾಗಿದೆ.

ಬೆಸ್ಟ್  ಡಿಪಾರ್ಟ್ ಮೆಂಟ್ ಸ್ಟೋರ್  ಎಂಬ ದಿನಸಿ ಅಂಗಡಿಯ ಶಟರ್ ಮುರಿದು ಕಳವುಗೈದಿದ್ದು ಅಂಗಡಿ ತೆರೆಯಲು ಬಂದಾಗ ಅಂಗಡಿಗೆ ಹಾಕಿದ್ದ 2 ಬೀಗಗಳು ಇಲ್ಲದೆ ಇದ್ದು ಪರಿಶಿಲಿಸಿದಾಗ 2  ಕಡೆಯ ಅಂಗಡಿಯ ಶೆಟರಿಗೆ ಹಾನಿಯಾಗಿರುತ್ತದೆ.

ಅಂಗಡಿಯ ಒಳಗೆ ಹೋಗಿ ಪರಿಶಿಲೀಸಿದಾಗ ಅಂಗಡಿಯಲ್ಲಿ ಇಟ್ಟಿದ್ದ ನಗದು ರೂಪಾಯಿ 8000/-, 1 ಡೆಲ್  ಕಂಪೆನಿಯ ಲ್ಯಾಪ್ ಟಾಪ್- ಮೌಲ್ಯ 22000/-, 1 ಆ್ಯಪಲ್  AIR POD 12,000/- ರೂಪಾಯಿ, ಪವಾರ್  ಬ್ಯಾಂಕ್  ಮೌಲ್ಯ -850/- ರೂಪಾಯಿ, ಸ್ಯಾಮ್ ಸಂಗ್ ಕಂಪೆನಿ  ಮೊಬೈಲ್ ಫೋನ್ -1 ಮೌಲ್ಯ 6000/- ರೂಪಾಯಿ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ .ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 48,850/- ರೂಪಾಯಿ ಆಗಿರುತ್ತದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker