ಉಡುಪಿ : ಕಾರಿನ ಗ್ಲಾಸ್ ಹೊಡೆದು ಲ್ಯಾಪ್’ಟಾಪ್ ಕಳ್ಳತನ..!

ಉಡುಪಿ: ಟ್ರೆಂಡ್ಸ್ ಫುಟ್ ವೇರ್ ಬಳಿ ನಿಲ್ಲಿಸಿದ್ದಂತಹ ಕಾರಿನ ಗಾಜನ್ನು ಒಡೆದು ಕಳ್ಳರು ಲ್ಯಾಪ್ ಟಾಪ್ ಎಗರಿಸಿದ ಘಟನೆ ವರದಿಯಾಗಿದೆ.
ಚೈತ್ರ ಶೆಟ್ಟಿ ಎಂಬುವವರು ಬೆಂಗಳೂರಿನಲ್ಲಿ Fis –Global Pvt Ltd ಎಂಬ ಐ ಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಸ್ನೇಹಿತ ಶ್ರೀನಿವಾಸ್ ಭಟ್ ರವರ ಕಾರು ನಂಬ್ರ ಕೆ ಎ -೦೧-ಎಂ ಕೆ ಕೆ -೫೭೨೮ ಕೊಲ್ಲೂರು, ಕಟೀಲು, ಮಂಗಳೂರಿನ ದೇವಸ್ಥಾನಕ್ಕೆ ಹೋಗಿ ಉಡುಪಿಗೆ ವಾಪಾಸು ಬಂದು ಉಡುಪಿಯ ಟ್ರೆಂಡ್ಸ್ ಪೂಟ್‌ವೇರ್ ಬಳಿಯ ರಸ್ತೆಯ ಬದಿಯಲ್ಲಿ ಕಾರನ್ನು ಪಾರ್ಕ್ ಮಾಡಿ ಬಂಟ್ಸ್ ಹೋಟೆಲ್‌ಗೆ ಊಟ ಪಾರ್ಸೆಲ್ ಮಾಡಿಕೊಂಡು ತರಲು ಹೋಗಿ ವಾಪಾಸು ಬಂದು ನೋಡಿದಾಗ ಕಾರಿನ ಹಿಂಬದಿಯ ಎಡ ಭಾಗದ ಗ್ಲಾಸ್ ನ್ನು ಒಡೆದು ಡಿಕ್ಕಿ ಹತ್ತಿರ ಸೀಟಿನ ಕೆಳಗೆ ಇದ್ದಂತಹ ಬ್ಯಾಗ್ ನ ಲಾಕ್ ಮಾಡಿ ಇಟ್ಟಿದ್ದ ಡೆಲ್ ಲ್ಯಾಪ್ ಟಾಪ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳವಾದ ಲ್ಯಾಪ್ ಟಾಪಿನ ಮೌಲ್ಯ ಸರಿಸುಮಾರು ರೂಪಾಯಿ ೭೦,೦೦೦/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.