ರಾಷ್ಟ್ರೀಯ
ಪಂಜಾಬ್ ನ ಯುವ ಅಕಾಲಿಕದಳದ ನಾಯಕನ ಹತ್ಯೆ…!

ಮೊಹಾಲಿ: ಪಂಜಾಬ್’ ನ ಯುವ ಅಕಾಲಿದಳದ ನಾಯಕ ವಿಕ್ಕಿ ಮಿದ್ದುಖೇರ ಎನ್ನುವವರನ್ನು ಇಂದು ಮೊಹಾಲಿಯಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ನಾಲ್ವರು ಸಶಸ್ತ್ರಧಾರಿಗಳು ೧೦ ಬಾರಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಮೊಹಾಲಿಯ ಭತೌರಿ ಮಾರ್ಕೆಟ್ ಬಳಿ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಗುಂಡೇಟಿನಿಂದ ಕುಸಿದುಬಿದ್ದಿದ್ದ ವಿಕ್ಕಿ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಸುಮಾರು ೧೦ ಬುಲೆಟ್ಗಳು ಅವರ ದೇಹವನ್ನು ಹೊಕ್ಕಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆಯ ಕುರಿತು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ಪರಿಶೀಲನೆ ನಡೆಸುತ್ತಿದ್ದಾರೆ.