ರಾಷ್ಟ್ರೀಯ

ಹೆಡ್​ಫೋನ್​ ಸ್ಫೋಟಗೊಂಡು ನವವಿವಾಹಿತ ಯುವಕ ಸಾವು…!

ಬ್ಲೂಟೂತ್​ ಹೆಡ್​ಫೋನ್​ ಸ್ಫೋಟಗೊಂಡು ನವವಿವಾಹಿತ ಯವಕನೊಬ್ಬ ಮೃತಪಟ್ಟಿದ್ದಾನೆ. ರಾಕೇಶ್​ ಕುಮಾರ್​ ನಗರ್​(೨೮) ಮೃತ ದುರ್ದೈವಿಯಾಗಿದ್ದಾರೆ. ಈ ದುರಂತವಾದ ಘಟನೆ ಜೈಪುರ ಜಿಲ್ಲೆ ಚೌಮು ನಗರದ ಉದಯಪುರಿ ಗ್ರಾಮದಲ್ಲಿ  ಘಟನೆ ನಡೆದಿದೆ.

ರಾಕೇಶ್ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಿ ಮಾಡಿಕೊಳ್ಳುತ್ತಿದ್ದರು. ೫ ತಿಂಗಳ ಹಿಂದಷ್ಟೆ, ಕಳೆದ ಫೆಬ್ರವರಿಯಲ್ಲಿ ರಾಕೇಶ್​ಗೆ ಮದುವೆ ಕೂಡಾ ಆಗಿತ್ತು. ನಿನ್ನೆ ಬ್ಲೂಟೂತ್​ ಹೆಡ್​ಫೋನ್​ ಅನ್ನು ಕಿವಿಗೆ ಹಾಕಿಕೊಂಡು ಮಾತನಾಡುತ್ತಿರುವಾಗಲೇ ಸ್ಫೋಟಗೊಂಡಿದೆ. ಪರಿಣಾಮ ಯುವಕನ ಕಿವಿಯಲ್ಲಿ ರಕ್ತ ಬಂದಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಸಿದ್ಧಿವಿನಾಯಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲವಾಗಿದೆ. ರಾಕೇಶ್ ಕಿವಿ ಪೂರ ಸುಟ್ಟ ಗಾಯಗಳಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!