
ಲವ್ಯೂ ರಚ್ಚು ಸಿನಿಮಾದ ಸಾಹಸದ ಚಿತ್ರೀಕರಣದ ವೇಳೆಯಲ್ಲಿ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿರುವ ಘಟನೆ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದಿದೆ.
ಚಿತ್ರೀಕರಣದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದ್ದು, ಚಿಕಿತ್ಸೆ ಫಲಿಸದೆ ವಿವೇಕ್ ಸಾವನ್ನಪ್ಪಿದ್ದರೆ, ಇನ್ನೋರ್ವನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಈ ಚಿತ್ರದಲ್ಲಿ ನಾಯಕನಾಗಿ ಅಜಯ್ ರಾವ್ ಹಾಗೂ ನಾಯಕಿಯಾಗಿ ರಚಿತಾ ರಾಮ್ ಅವರು ಅಭಿನಯ ಮಾಡುತ್ತಿದ್ದಾರೆ. ಲವ್ ಯೂ ರಚ್ಚು ಸಿನಿಮಾವನ್ನು ಶಂಕರ್ ರಾಜ್ ನಿರ್ದೇಶನ ಮಾಡಿದ್ದು, ಖ್ಯಾತ ನಿರ್ದೇಶಕ ಶಶಾಂಕ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗುರುದೇಶಪಾಂಡೆ ನಿರ್ಮಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
2016 ರ ನವೆಂಬರ್ನಲ್ಲಿ ದುನಿಯಾ ವಿಜಯ್ ನಟನೆಯ ‘ಮಾಸ್ತಿ ಗುಡಿ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ಖಳನಟರಾದ ಅನಿಲ್, ಉದಯ್ ಪ್ರಾಣ ಕಳೆದುಕೊಂಡಿದ್ದ ದುರ್ಘಟನೆ ರಾಮನಗರದ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆದಿತ್ತು. ಹೆಲಿಕಾಫ್ಟರ್ ನಿಂದ 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಹಾರಿದ್ದ ಅನಿಲ್ ಮತ್ತು ಉದಯ್ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ದುರಂತ ಮರಣ ಹೊಂದಿದ್ದರು.