ರಾಷ್ಟ್ರೀಯ

ಸೇನಾವಲಯದಲ್ಲಿ ಐತಿಹಾಸಿಕ ‌ಮೈಲಿಗಲ್ಲು ಸಾಧಿಸಿದ ಭಾರತ / ವಿಕ್ರಾಂತ್‌ ಯುದ್ದನೌಕೆ ಪರೀಕ್ಷಾರ್ಥ ಪ್ರಯೋಗ ಯಶಸ್ವಿ..

ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ (IAC) ವಿಕ್ರಾಂತ್ ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. ೪೦,೦೦೦ ಟನ್​ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಅಂದಾಜು ೨೩ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್​ ಯುದ್ಧನೌಕೆ ಯನ್ನು ತಯಾರಿಸಲಾಗಿದೆ. ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್​​ನಿಂದ ಭಾರತೀಯ ನೌಕಾಪಡೆಯನ್ನು ಸೇರಲಿದೆ.

ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಿದೆ. ಇದು ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದು ಉಪ ನೌಕಾ ಸೇನಾಪತಿ ಎ.ಕೆ.ಚಾವ್ಲಾ ತಿಳಿಸಿದ್ದಾರೆ.
ಯುದ್ಧನೌಕೆಯ ಐದು ದಿನಗಳ ಪ್ರಯೋಗದ ನಂತರ ನಾವೀಗ ಕೊಚ್ಚಿಗೆ ವಾಪಸ್​ ಆಗುತ್ತಿದ್ದೇವೆ. ನಮಗೀಗ ಸಂಪೂರ್ಣ ತೃಪ್ತಿಯಿದೆ. ಇಡೀ ತಂಡದ ಶ್ರಮದಿಂದ ಇಂಥದ್ದೊಂದು ಮಹತ್ವದ ಕಾರ್ಯ ಸಾಧಿಸಲು ಸಾಧ್ಯವಾಗಿದೆ ಎಂದು ಎ.ಕೆ.ಚಾವ್ಲಾ ತಿಳಿಸಿದ್ದಾರೆ

ಯುದ್ಧ ನೌಕೆಯ ಸಿಸ್ಟಂ ಪ್ಯಾರಾಮೀಟರ್​ಗಳು ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿವೆ. ನೌಕೆಯ ಒಟ್ಟಾರೆ ಕಾರ್ಯಕ್ಷಮತೆ, ಹಲ್, ವಿದ್ಯುತ್​ ಉತ್ಪಾದನೆ, ಪೂರೈಕೆ ಸೇರಿ ಎಲ್ಲ ವಿಭಾಗಗಳನ್ನೂ ಪ್ರಯೋಗ ಹಂತದಲ್ಲಿ ಪರೀಕ್ಷಿಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ. ಈ ಯುದ್ಧನೌಕೆ ೨೬೨ ಮೀಟರ್​ ಉದ್ದವಾಗಿದ್ದು, ೬೨ ಮೀಟರ್​ ಅಗಲವಾಗಿದೆ. ೫೯ ಮೀಟರ್​ ಎತ್ತರವಿದೆ. ಒಟ್ಟಾರೆ ೧೪ ಡೆಕ್​ಗಳಿವೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!