ಪಾರ್ಟಿ ಮಾಡಿ 7 ಲಕ್ಷ ಬಿಲ್ ಕೊಡದೇ ರಾತ್ರೋ ರಾತ್ರಿ ಎಸ್ಕೇಪ್…!

ಮೋಜು ಮಸ್ತಿ ಜೊತೆ ಎಣ್ಣೆ ಪಾರ್ಟಿ ಮಾಡಿ ಬಿಲ್ ಕೊಡದೇ ಹೋಟೆಲ್ ನಿಂದ ಎಸ್ಕೇಪ್ ಆಗಿರೋ ಘಟನೆ, ಕೆ.ಆರ್.ಪುರಂ ಬಳಿಯ ವೈ.ಎನ್. ಸ್ಟಾರ್ ಹೋಟೆಲ್ ನಲ್ಲಿ ಘಟನೆ ನಡೆದಿದೆ.
ಕಳೆದ 15 ದಿನಗಳ ಹಿಂದೆ ಆನ್ಲೈನ್ ಮೂಲಕ ಅರವಿಂದ್ ಮತ್ತು ತಿವಾರಿ ಎಂಬುವವರು ಒಂದು ರೂಂ ಬುಕ್ ಮಾಡ್ತಾರೆ. ನಂತರ ತನ್ನ ಗೆಳೆಯರಿಗೆಂದು 6 ರೂಂ ಬುಕ್ ಮಾಡಿ ಪಾರ್ಟಿ ಮಾಡ್ತಾರೆ. ನಂತರ, ಊಟ ತಿಂಡಿ ಎಣ್ಣೆ ಅಂತ ಹೋಟೆಲ್ನಿಂದಲೇ ಪಾರ್ಸಲ್ ತರಿಸಿ ಗೆಳೆಯರೊಂದಿಗೆ ಪಾರ್ಟಿ ಮಾಡ್ತಾರೆ.
ಪಾರ್ಟಿ ನಂತರ ಅದೇ ಹೋಟೆಲ್ನಲ್ಲಿ 15 ದಿನಗಳ ಕಾಲ ವಾಸವಿರ್ತಾರೆ. ಮೊದಲಿಗೆ 50ಸಾವಿರ ಅಡ್ವಾನ್ಸ್ ಕೊಟ್ಟಿದ್ದ ಅರವಿಂದ್ ಹಾಗೂ ತಿವಾರಿ, ಪಾರ್ಟಿ ಮಾಡಿ, ಬಿಲ್ ಎಷ್ಟಾದ್ರೂ ಡೋಂಟ್ ವರಿ ನಿಮಗೆ ಸಿಂಗಾಪುರ್ ಡಾಲರ್ನಲ್ಲಿ ಬಿಲ್ ಕ್ಲಿಯರ್ ಮಾಡ್ತೀನಿ ಅಂತ ಬಿಲ್ಡಪ್ ಕೊಟ್ಟಿದ್ರಂತೆ. ಒಟ್ಟು 15ದಿನಗಳ ಕಾಲ ವಾಸವಿದ್ದ ಈ ಇಬ್ಬರೂ ಕಿಲಾಡಿಗಳ ಒಟ್ಟು ಬಿಲ್ 7 ಲಕ್ಷ ರೂಪಾಯಿಗಳ ಆಗಿದೆ.
ಇದೀಗ ಅರವಿಂದ್ ಹಾಗೂ ತಿವಾರಿ 7 ಲಕ್ಷ ಬಿಲ್ ಕೊಡದೇ ಹೋಟೆಲ್ನಿಂದ ರಾತ್ರೋ ರಾತ್ರಿ ಕಾಲ್ಕಿತ್ತಿದ್ದಾರಂತೆ. ಸದ್ಯ, ಹೋಟೆಲ್ ಮ್ಯಾನೇಜರ್ ಜಗದೀಶ್ ರಿಂದ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.