
ದಿನಾಂಕ:12-08-2021 ಭಾರತೀಯ ಲೆಕ್ಕ ಪರಿಶೋಧಕರ ಸಂಘ(ಐಸಿಎಐ) ವಿಶ್ವದ ಚಾರ್ಟರ್ಡ್ ಅಕೌಂಟೆಂಟ್ಸ್ ಗಳ ಎರಡನೇ ದೊಡ್ಡ ವೃತ್ತಿಪರ ಮಂಡಳಿಯಾಗಿದೆ.
ಸರ್ಕಾರವು ಐಸಿಎಐ ಅನ್ನು ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರನಾಗಿ ನೋಡುತ್ತದೆ. ಐಸಿಎಐನಲ್ಲಿ ಸುಮಾರು 3 ಲಕ್ಷಕ್ಕೂ ಮೀರಿ ಸದಸ್ಯರು ಮತ್ತು 7.50 ಲಕ್ಷಕ್ಕೂ ಮೀರಿ ವಿದ್ಯಾರ್ಥಿಗಳು ನೋಂದಾಯಿತರಾಗಿದ್ದರೆ. ಐಸಿಎಐ ನವದೆಹಲಿಯಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ ಮತ್ತು 160 ಕ್ಕೂ ಹೆಚ್ಚು ಶಾಖೆಗಳನ್ನು, 5 ಪ್ರಾದೇಶಿಕ ಮಂಡಳಿಗಳು ಮತ್ತು ವಿದೇಶದಲ್ಲಿ 35 ಅಧ್ಯಾಯಗಳನ್ನು ಹೊಂದಿದೆ.
ಐಸಿಎಐನ ಮಂಗಳೂರಿನ ಶಾಖೆಯ ಬಗ್ಗೆ:
ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರಿನ ಶಾಖೆಯನ್ನು ಆಗಸ್ಟ್ 18, 1971 ರಂದು ಸ್ಥಾಪಿಸಲಾಯಿತು.
ಮಂಗಳೂರು ಶಾಖೆಯ ವ್ಯಾಪ್ತಿಯು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿದೆ, ಸುಮಾರು 850 ಕ್ಕೂ ಹೆಚ್ಚು ಸದಸ್ಯರು ಮತ್ತು 3,800 ಕ್ಕಿಂತ ಹೆಚ್ಚು ಸಿಎ ವಿದ್ಯಾರ್ಥಿಗಳು ಶಾಖೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಮಂಗಳೂರಿನ ಶಾಖೆಯು ಸಂಸ್ಥೆಯ ಉತ್ತಮ ಶಾಖೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ತನ್ನ ಸರ್ವತೋಮುಖ ಚಟುವಟಿಕೆಗಳಿಗಾಗಿ, ಉದಾಹರಣೆಗೆ, ಅದರ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಸಮ್ಮೇಳನಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು, ಅಧ್ಯಯನ ವಲಯಗಳು ಇತ್ಯಾದಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಛಾಪನ್ನು ಮೂಡಿಸಿದೆ. ಇದು ತನ್ನದೇ ವಿಶಾಲವಾದ ಕ್ಯಾಂಪಸ್ ಅನ್ನು ಹೊಂದಿದೆ, ವಿಶಾಲವಾದ ಹವಾನಿಯಂತ್ರಿತ ಆಡಿಟೋರಿಯಂ, ಕಂಪ್ಯೂಟರ್ ಲ್ಯಾಬ್/ತರಗತಿ ಕೊಠಡಿಗಳು/ಗ್ರಂಥಾಲಯ/ವಿದ್ಯಾರ್ಥಿಗಳಿಗೆ ಓದುವ ಕೊಠಡಿ, ಬೋರ್ಡ್ ರೂಂ ಮತ್ತು ಇತರ ಸೌಲಭ್ಯಗಳು ಪಡೀಲ್ ನ ‘ಐಸಿಎಐ ಭವನ್’, ಮಂಗಳೂರುನಲ್ಲಿ ಲಭ್ಯವಿದೆ.
ಮಂಗಳೂರು ಶಾಖೆಯು ಕೋವಿಡ್ ಸಮಯದಲ್ಲಿ ಸಮಾಜದ ಪ್ರಯೋಜನಕ್ಕಾಗಿ ಅನೇಕ ಚಟುವಟಿಕೆಗಳನ್ನು ಕೈಗೊಂಡಿದೆ.
ಮಂಗಳೂರು ಶಾಖೆಯು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಸುಮಾರು ರೂ. 7.50 ಲಕ್ಷ ವೈದ್ಯಕೀಯ ಸಲಕರಣೆಗಳನ್ನು , 73ನೇ ಸಿಎ ದಿನಾಚರಣೆಯ ಅಂಗವಾಗಿ ಕುತ್ತಾರ್ ನ ಮಕ್ಕಳ ರಕ್ಷಣೆ ಸಂಸ್ಥೆಗೆ ರೂ. 73,000 / ; ಸಿಎ ಸದಸ್ಯರು, ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಕೆಎಂಸಿ ಸಹಯೋಗದಲ್ಲಿ ಕೋವಿಡ್ ವಾಕ್ಸಿನ್ ಡ್ರೈವ್ ನಡೆಸಿದೆ.
ಐಸಿಎಐನ ಮಂಗಳೂರು ಶಾಖೆಯಲ್ಲಿ ಸುವರ್ಣ ಮಹೋತ್ಸವ ಆಚರಣೆಗಳು:
ಐಸಿಎಐನ ಮಂಗಳೂರು ಶಾಖೆಯು 2020-21ಇಸವಿಯನ್ನು ಸುವರ್ಣ ಮಹೋತ್ಸವ ವರ್ಷವನ್ನಾಗಿ ಆಚರಿಸುತ್ತಿದೆ.ಈ ಸಂದರ್ಭದಲ್ಲಿ , ಮಂಗಳೂರು ಶಾಖೆಯು “ಸ್ವರ್ಣ ಪರ್ವ” ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಆಗಸ್ಟ್ 18, 19 ಮತ್ತು 20, 2021 ರಂದು ಫಿಜಿಟಲ್ ಕ್ರಮದಲ್ಲಿಆಯೋಜಿಸಿದೆ.
ಆಗಸ್ಟ್ 18ರಂದು ಉದ್ಘಾಟನಾ ಕಾರ್ಯಕ್ರಮ – -ಕಾರ್ಯಕ್ರಮವನ್ನು ಸಂಸತ್ತಿನ ಗೌರವಾನ್ವಿತ ಸದಸ್ಯರಾದ ಸಿಎ ಅರುಣ್ ಸಿಂಗ್, ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐಸಿಎಐ ಅಧ್ಯಕ್ಷ ಸಿಎ ನಿಹಾರ್ ಎನ್ ಜಂಬೂಸಾರಿಯಾ ಮತ್ತು ಸಿಎ ವಿಶ್ವನಾಥ್ ಪಿ ಎಸ್, ಎಂ. ಡಿ ಮತ್ತು ಸಿಇಒ ರಾಂಡ್‌ಸ್ಟ್ಯಾಡ್ ಇಂಡಿಯಾ ಭಾಗವಹಿಸಲಿದ್ದಾರೆ. ಸಿಎ (ಡಾ.) ದೇಬಾಶಿಸ್ ಮಿತ್ರ, ಐಸಿಎಐ ಉಪಾಧ್ಯಕ್ಷರು ಗೌರವ ಅತಿಥಿಗಳಾಗಿರುತ್ತಾರೆ. ಉದ್ಘಾಟನಾ ಸಮಾರಂಭದಲ್ಲಿ ಸಿಎ (ಡಾ.) ಸಂಜೀವ್ ಕುಮಾರ್ ಸಿಂಘಾಲ್, ಸಿಸಿಎಂ, ಅಧ್ಯಕ್ಷರು-ಸಿಎಂಪಿ ಐಸಿಎಐ, ಸಿಎ ಪ್ರಸನ್ನ ಕುಮಾರ್ ಡಿ, ಸಿಸಿಎಂ, ಉಪಾಧ್ಯಕ್ಷ- ಸಿಎಂಪಿ ಐಸಿಎಐ ಮತ್ತು ಸಿಎ ಜಲಪತಿ ಕೆ, ಅಧ್ಯಕ್ಷರು, ಎಸ್ಐಆರ್ ಸಿ ಉಪಸ್ಥಿತರಿರುವರು.
ಉದ್ಘಾಟನಾ ಕಾರ್ಯಕ್ರಮದ ನಂತರ ೩ ದಿನಗಳು ಅನೇಕ ಮಾಹಿತಿ ಕಾರ್ಯಾಗಾರಗಳು ನಡೆಯಲಿವೆ.
ಸುವರ್ಣ ಶಿಖರವನ್ನು ತಲುಪುವ ಈ ಸುವರ್ಣ ಉತ್ಸವವು ಮಂಗಳೂರು ಶಾಖೆಗೆ ಹೆಚ್ಚಿನ ವೈಭವವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಿಎಗಳನ್ನು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಗುರುತಿಸಿ ಗೌರವಿಸಲಾಗುತ್ತದೆ.
ಈ ಪ್ರೆಸ್ ಮೀಟ್ ಮೂಲಕ ವ್ಯವಸ್ಥಾಪನಾ ಸಮಿತಿಯು ಕಾರ್ಯಕ್ರಮಗಳಲ್ಲಿ ನಿಮ್ಮ ಪೂರ್ಣಹೃದಯದ ಭಾಗವಹಿಸುವಿಕೆ ಮತ್ತು ನಿಮ್ಮ ಪ್ರತಿಷ್ಠಿತ ಮಾಧ್ಯಮದಲ್ಲಿ ಸುದ್ದಿಗಳ ಗರಿಷ್ಠ ಪ್ರಸಾರವನ್ನು ವಿನಂತಿಸುತ್ತದೆ.
ಅಭಿನಂದನೆಗಳು
ಸಿಎ ಕೆ ಸುಬ್ರಹ್ಮಣ್ಯ ಕಾಮತ್
ಅಧ್ಯಕ್ಷರು, ಮಂಗಳೂರು ಶಾಖೆ ಐಸಿಎಐ
ಸದಸ್ಯರು :
ಸಿಎ ಕೆ ಸುಬ್ರಹ್ಮಣ್ಯ ಕಾಮತ್, ಅಧ್ಯಕ್ಷರು ಐಸಿಎಐ ಮಂಗಳೂರು ಶಾಖೆ,
ಸಿಎ ಎಸ್ ಎಸ್ ನಾಯಕ್, ನಿಕಟಪೂರ್ವ ಅಧ್ಯಕ್ಷರು
ಸಿಎ ಪ್ರಸನ್ನ ಶೆಣೈ ಎಂ, ಕಾರ್ಯದರ್ಶಿ
ಸಿಎ ಗೌತಮ್ ನಾಯಕ್ ಎಂ, ಖಜಾಂಚಿ
ಸಿಎ ಎಂ ಎನ್ ಪೈ, ಮಾಜಿ ಅಧ್ಯಕ್ಷರು