
ನಾವು ಭಾರತೀಯರು
ಕೆಚ್ಚೆದೆಯ ವೀರರು
ನಮ್ಮ ನಾಡ ಹಿರಿಮೆಗೆಂದು
ಹರಿಸುವೆವು ನೆತ್ತರು ||ನಾವು||
ಗಂಗೆ ತುಂಗೆ ಗೋದೆ ಕೃಷ್ಣೆ
ಯಮುನೆ ಶರಾವತಿಯರು
ಭರತ ಭೂಮಿ ಸುತೆಯರು
ಸಿರಿಯ ತಂದು ಸುರಿವರು ||ನಾವು||
ಇಲ್ಲಿ ಗಾಂಧಿ ತಿಲಕರಾದಿ
ಮೆರೆದರಾ ಸುಭಾಷರು
ನೆಹರು ಠಾಗೂರರು
ಲಾಲಬಹದ್ದೂರರು ||ನಾವು||
ಉತ್ತರದ ಎತ್ತರಕ್ಕೆ ಬೆಳೆದ
ಬೆಳ್ಳಿ ಶಿಖರವು
ನಮಗೆ ಭಾಗ್ಯ ಸುರಿವವು
ರಕ್ಷೆಗಾಗಿ ನಿಂತವು ||ನಾವು||
ಸುತ್ತುವರಿದು ಮೆರೆಯುತಿರುವ
ಭೋರ್ಗೆರೆವ ಸಾಗರ
ನಮಗೆ ನಿತ್ಯ ಸಡಗರ
ನಮಗೆ ನಿತ್ಯ ಭಾಗ್ಯವು ||ನಾವು||