ವಿಶೇಷ ಲೇಖನಗಳು

ಆಧಾರ್ ಕಾರ್ಡ್ ಕಳೆದು ಹೋದರೆ ಚಿಂತೆ ಪಡಬೇಡಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ..!

ಸರ್ಕಾರದ ಎಲ್ಲಾ ಅಧಿಕೃತ ಕೆಲಸಗಳಿಗೆ ಆಧಾರ್ ಕಾರ್ಡ್ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದು. ರಾಜ್ಯ ಸರ್ಕಾರಗಳ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಹಲವಾರು ಪ್ರಯೋಜನಗಳನ್ನು ಪಡೆಯಲು ಗುರುತಿನ ಪುರಾವೆಗೆ ಆಧಾರ್ ಕಾರ್ಡ್ ಅಗತ್ಯವಿದೆ.

ಒಂದು ವೇಳೆ ನೀವು ಆಧಾರ್ ಕಾರ್ಡ್‌ ಕಳೆದುಕೊಂಡಿದ್ದರೆ, ಚಿಂತಿಸಬೇಕಾಗಿಲ್ಲ. ಏಕೆಂದರೆ ನೀವು ಪಿವಿಸಿ ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್‌ನಿಂದ ಸುಲಭವಾಗಿ ಪಡೆಯಬಹುದು.

ನೀವು ಮೊದಲು ಮಾಡಬೇಕಾಗಿರುವುದು ನಿಮ್ಮ ಆಧಾರ್ ಕಾರ್ಡ್‌ನ ಪಿವಿಸಿ(PVC Aadhar Card) ಪ್ರತಿಯನ್ನು ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಬಳಸಬಹುದಾದ ಸರಳ ಕ್ರಮಗಳನ್ನು. ನೀವು ಹೇಗೆ ಅದಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂಬುದು ಇಲ್ಲಿದೆ.

ಪುಟದಲ್ಲಿ, ನೀವು ಹೊಸದಾಗಿ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ.

• ಪರದೆಯ ಮೇಲೆ ಭದ್ರತಾ ಕೋಡ್‌ನೊಂದಿಗೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ನೀವು ಪರಿಶೀಲಿಸಬೇಕಾಗುತ್ತದೆ.

• ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನಲ್ಲಿ ನೋಂದಾಯಿಸಲಾಗಿದೆಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸಬೇಕು. ನಿಮ್ಮ ಸಂಖ್ಯೆಯನ್ನು ಈಗಾಗಲೇ ನೋಂದಾಯಿಸಿದ್ದರೆ, ಅಲ್ಲಿ ನೀಡಿರುವ ಬಾಕ್ಸ್ ನಲ್ಲಿ ಗುರುತಿಸಬೇಕು.

• ನೋಂದಾಯಿಸಿದ ಮೊಬೈಲ್ ನಂಬರ್ ಗೆ OTP ಕಳುಹಿಸುವ ಬಟನ್ ಮೇಲೆ ಕ್ಲಿಕ್ ಮಾಡಿ.

• ಆಗ OTP ನಿಮ್ಮ ಮೊಬೈಲ್ ನಂಬರ್ ಗೆ ಬರುತ್ತದೆ.

• ಈಗ, ನೀವು PVC ಆಧಾರ್ ಕಾರ್ಡ್ ಶುಲ್ಕವಾಗಿ 50 ರೂ. ಕಟ್ಟಬೇಕು.

• ಯಶಸ್ವಿ ಪಾವತಿಯ ನಂತರ, ನಿಮ್ಮ ಆದೇಶವನ್ನು UIDAI ಪ್ರಕ್ರಿಯೆಗೊಳಿಸುತ್ತದೆ.

ಯುಐಡಿಎಐನಿಂದ ನಿಮ್ಮ PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಿದ ನಂತರ ಅದು ನಿಮ್ಮ ಕೈ ತಲುಪಲು ಎರಡು ವಾರಗಳವರೆಗೆ ಕಾಯಬೇಕಾಗುತ್ತದೆ.

ಗಮನಾರ್ಹವಾಗಿ, UIDAI ಆಧಾರ್ ಕಾರ್ಡ್ ಅನ್ನು ಭಾರತದಾದ್ಯಂತ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಭಾರತ ಅಂಚೆ ಕಚೇರಿಯೊಂದಿಗೆ ಪಾಲುದಾರಿಕೆ ಕೂಡ ಹೊಂದಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker