ಅಂತಾರಾಷ್ಟ್ರೀಯ
ಉಜ್ಬೇಕಿಸ್ತಾನದಲ್ಲಿ ಅಫ್ಘಾನ್ ಸೇನಾ ವಿಮಾನ ಪತನ..!

ಉಜ್ಬೇಕಿಸ್ತಾನ್: ಅಫ್ಘಾನಿಸ್ತಾನದ ಸೇನಾ ವಿಮಾನ ಪಕ್ಕದ ಉಜ್ಬೇಕಿಸ್ತಾನದಲ್ಲಿ ಪತನಗೊಂಡಿದೆ ಎಂದು ಮಧ್ಯ ಏಷ್ಯಾ ದೇಶದ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ ಎಂದು ವರದಿಯಾಗಿದೆ.
ಭಾನುವಾರ ತಡರಾತ್ರಿ ಸೇನಾ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಪೈಲೆಟ್ ಸೇರಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಾನೂನುಬಾಹಿರವಾಗಿ ಉಜ್ಬೇಕಿಸ್ತಾನದ ಗಡಿಯನ್ನು ಅಫ್ಘಾನ್ ವಿಮಾನ ದಾಟಿದ್ದು, ತನಿಖೆ ನಡೆಯುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.