ಐಸಿಎಐ ಮಂಗಳೂರು ಶಾಖೆಯಲ್ಲಿ “ಸ್ವರ್ಣ ಪರ್ವ ”ದ ಸಂಭ್ರಮ..!

ಆಗಸ್ಟ್ 19, ಬುಧವಾರದಂದು ನಗರದ ಐಸಿಎಐ ಮಂಗಳೂರು ಶಾಖೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ “ಸ್ವರ್ಣ ಪರ್ವ” ಎಂಬ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ನಡೆಯಿತು. ಈ ಕಾರ್ಯಕ್ರಮವನ್ನು ಸಿಎ ಅರುಣ್ ಸಿಂಗ್, ಮಾನ್ಯ ಸಂಸದರು ಉದ್ಘಾಟಿಸಿದರು.ಅವರು ದೇಶದ ಪ್ರಗತಿಯಲ್ಲಿ ಹಾಗೂ ಎಮ್ ಎಸ್.ಎಮ್.ಇ. ಗಳ ಏಳಿಗೆಗೆ ಸಿಎಗಳ ಪಾತ್ರ ದೊಡ್ಡದು ಎಂದು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಸಿಎ ನಿಹಾರ್ ಎನ್. ಜಂಬೂಸರಿಯ, ಅಧ್ಯಕ್ಷರು, ದಿ ಇನ್ಸ್ಟಿಟ್ಯೂಟ್ ಒಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಒಫ್ ಇಂಡಿಯಾ (ಐಸಿಎಐ), ಸಿಎ ವಿಶ್ವನಾಥ್ ಪಿ. ಎಸ್. ,ಎಂ. ಡಿ ಮತ್ತು ಸಿಇಒ ರಾಂಡ್‌ಸ್ಟ್ಯಾಡ್ ಇಂಡಿಯಾ, ಗೌರವಾನ್ವಿತ ಅತಿಥಿಯಾಗಿ ಸಿಎ (ಡಾ.) ದೇಬಾಶಿಶ್ ಮಿತ್ರ, ಉಪಾಧ್ಯಕ್ಷರು, ಐಸಿಎಐ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಸಿಎ (ಡಾ.) ಸಂಜೀವ್ ಕುಮಾರ್ ಸಿಂಘಾಲ್, ಸಿಸಿಎಂ, ಅಧ್ಯಕ್ಷರು-ಸಿಎಂಪಿ ಐಸಿಎಐ, ಸಿಎ ಪ್ರಸನ್ನ ಕುಮಾರ್ ಡಿ, ಸಿಸಿಎಂ, ಉಪಾಧ್ಯಕ್ಷ- ಸಿಎಂಪಿ ಐಸಿಎಐ ಮತ್ತು ಸಿಎ ಜಲಪತಿ ಕೆ, ಅಧ್ಯಕ್ಷರು, ಎಸ್ಐಆರ್ ಸಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಿಎ ಗೀತಾ ಎ. ಬಿ., ಎಸ್ ಐ ಆರ್ ಸಿ – ಪ್ರಾದೇಶಿಕ ಮಂಡಳಿಯ ಸದಸ್ಯರು, ಮಂಗಳೂರು ಶಾಖೆಯ, ಅಧ್ಯಕ್ಷರು ಸಿಎ ಕೆ. ಎಸ್. ಕಾಮತ್, ನಿಕಟಪೂರ್ವ ಅಧ್ಯಕ್ಷರಾದ ಸಿಎ ಎಸ್ ಎಸ್ ನಾಯಕ್, ಉಪಾಧ್ಯಕ್ಷರಾದ , ಸಿಎ ಅಬ್ದುರ್ ರೆಹಮಾನ್ ಮುಸ್ಬಾ, ಕಾರ್ಯದರ್ಶಿ ಸಿಎ ಪ್ರಸನ್ನ ಶೆಣೈ ಎಂ, ಖಜಾಂಚಿ, ಸಿಎ ಗೌತಮ್ ನಾಯಕ್, ಸಿಎ ಕೆ ಅನಂತಪದ್ಮನಾಭ, ಮಾಜಿ ಅಧ್ಯಕ್ಷರು, ಸಿಎ ಎ ಕೆ ರಂಗನಾಥ ಶೆಣೈ, ಸಿಎ ಗಿರಿಧರ್ ಕಾಮತ್, ಸಿಎ ಕೇಶವ ಬಲ್ಲಕುರಾಯ, ಸಿಎ ಶಿವಕುಮಾರ್ ಕೆ , ಸಿಎ ಭಾರ್ಗವ ತಂತ್ರಿ ಉಪಸ್ಥಿತರಿದ್ದರು
ದಿನಾಂಕ 19 ಹಾಗೂ 20 ಆಗಸ್ಟ್ ರಂದು ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಿಎ ಉಲ್ಲಾಸ್ ಕಾಮತ್, ಸಿಎ ರಾಜೇಶ್ ಪೈ, ಸಿಎ ಸುಜಯ್ ಕಾಮತ್, ಸಿಎ ಎಸ್ ಎಸ್ ನಾಯಕ್, ಸಿಎ ಎಂ. ಜಿ. ರಾಮಚಂದ್ರ ಮೂರ್ತಿ , ಸಿಎ ಪ್ರಕಾಶ್ ಬಾಸ್ರಿ, ಸಿಎ ಶ್ರೀರಾಮುಲು ನಾಯ್ಡು, ಸಿಎ ಡಿ. ಬಿ. ಮೆಹ್ತಾ, ಸಿಎ ಅನಂತೇಶ್ ಪ್ರಭು, ಸಿಎ ಎ ಕೆ ಅನಂತ್ ಶೆಣೈ ಅವರನ್ನು ಸನ್ಮಾನಿಸಲಾಗುತ್ತದೆ. ಆಗಸ್ಟ್ 19ರ ಸನ್ಮಾನ ಕಾರ್ಯಕ್ರಮದಲ್ಲಿ ಸಿಎ ದಯಾನಿವಾಸ್ ಶರ್ಮಾ, ಸಿಸಿಎಂ – ಐಸಿಎಐ ಹಾಗೂ ಶ್ರೀಮತಿ. ಘಾಯತ್ರಿ ಆರ್, ಜಿ ಎಮ್, ಬ್ಯಾಂಕ್ ಒಫ್ ಬರೋಡ, ಇವರು ಮಾನ್ಯ ಅತಿಥಿತಿಗಳಾಗಿ ಉಪಸ್ಥಿತರಿರುತ್ತಾರೆ. ಸಮಾರೋಪ – ಸಮಾರಂಭಕ್ಕೆ ಶ್ರೀ ಬಿ. ಯೋಗೀಶ್ ಆಚಾರ್ಯ , ಜಿ ಎಮ್, ಕೆನರಾ ಬ್ಯಾಂಕ್ ವೃತ್ತ ಕಚೇರಿ, ಮಂಗಳೂರು, ಶ್ರೀ . ರಾಜೇಶ್ ಗುಪ್ತಾ, ಡಿ. ಜಿ. ಎಂ, ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ , ಮಂಗಳೂರು ಹಾಗೂ ಶ್ರೀ ಮಹೇಶ್ ಜೆ , ಪ್ರಾದೇಶಿಕ ಮುಖ್ಯಸ್ಥರು, ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾ, ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಮಾರೋಪ – ಸಮಾರಂಭದ ಕಾರ್ಯಕ್ರಮದಲ್ಲಿ ಐವತ್ತು ವರ್ಷಗಳಿಂದ ಸಿಎ ಕ್ಷೇತ್ರದಲ್ಲಿ ಸೇವೆ ನೀಡಿದವರನ್ನು ಸನ್ಮಾನಿಸಲಾಗುವುದು.