ಕರಾವಳಿ
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ..!

ಉಡುಪಿ: ಆನ್‌ಲೈನ್ ಕ್ಲಾಸ್ ಆಲಿಸುತ್ತಲೇ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.
ಪಟ್ಟಣದ ಬಿರ್ಲಾ ಕ್ವಾಟರ್ಸ್ ನಿವಾಸಿ, ಬೆಂಗಳೂರು ಬೇಕರಿ ವ್ಯಾಪಾರಿ ಗಿರೀಶ ಉಡುಪ ರವರ ಪುತ್ರ ಗುರುಚರಣ್ ಉಡುಪ (೧೭) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಮೃತ ವಿದ್ಯಾರ್ಥಿ ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ಅಭ್ಯಾಸದಲ್ಲಿ ರ‍್ಯಾಂಕ್ ವಿದ್ಯಾರ್ಥಿ ಎನ್ನಲಾಗಿದೆ.
ಆನ್‌ಲೈನ್ ಕ್ಲಾಸ್ ಕೇಳಲು ಮನೆಯ ಒಳ ಕೋಣೆಯೊಳಗೆ ಹೋದಾತ ಎರಡು ತಾಸಿನ ಬಳಿಕ ಪೋಷಕರಿಗೆ ಫ್ಯಾನಿಗೆ ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣಗಳು ಇನ್ನು ತಿಳಿದುಬಂದಿಲ್ಲ.