
ನಗರದ ಐಸಿಎಐ ಮಂಗಳೂರಿನಲ್ಲಿ, ಗುರುವಾರ, ಆಗಸ್ಟ್ 19 ರಂದು ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಲೆಕ್ಕ ಪರಿಶೋಧಕರನ್ನು ಸನ್ಮಾನಿಸಲಯಿತು. ಮುಖ್ಯ ಅತಿಥಿಯಾಗಿ ಸಿಎ ದಯಾನಿವಾಸ್ ಶರ್ಮಾ, ಸಿಸಿಎಂ – ಐಸಿಎಐ, ನವ ದೆಹಲಿ ಇವರು ಭಾಗವಹಿಸಿದರು. ಶ್ರೀಮತಿ. ಗಾಯತ್ರಿ ಆರ್, ಮಹಾ ಪ್ರಬಂಧಕಿ , ಬ್ಯಾಂಕ್ ಒಫ್ ಬರೋಡ, ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಐಸಿಎಐ ಭವನ ಪಡೀಲ್, ಮಂಗಳೂರು ಇಲ್ಲಿ ನಡೆದ ಫಿಜಿಟಲ್ ಕಾರ್ಯಕ್ರಮದಲ್ಲಿ, ಸಿಎ ಉಲ್ಲಾಸ್ ಕಾಮತ್, ಜಂಟಿ ಎಮ್.ಡಿ., ಜ್ಯೋತಿ ಲ್ಯಾಬೊರೇಟರೀಸ್ ಲಿಮಿಟೆಡ್, ಸಿಎ ರಾಜೇಶ್ ಪೈ, ವಿತರಣಾ ಮುಖ್ಯಸ್ಥರು, ಇನ್ಫೋಸಿಸ್ ಲಿಮಿಟೆಡ್, ಸಿಎ ಸುಜಯ್ ಕಾಮತ್, ವಿತ್ತ ಪ್ರಧಾನ ವ್ಯವಸ್ಥಾಪಕರು, ಎಮ್.ಸಿ ಎಫ್. ಲಿಮಿಟೆಡ್, ಹಾಗೂ ಸಿಎ ಎಸ್ ಎಸ್ ನಾಯಕ್, ನಿಕಟ ಪೂರ್ವ ಅಧ್ಯಕ್ಷರು, ಮಂಗಳೂರು ಐಸಿಎಐ ಇವರನ್ನು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಐಸಿಎಐ ಶಾಖೆಯ ಅಧ್ಯಕ್ಷರಾದ ಸಿಎ ಕೆ. ಎಸ್. ಕಾಮತ್, ಉಪಾಧ್ಯಕ್ಷರಾದ , ಸಿಎ ಅಬ್ದುರ್ ರೆಹಮಾನ್ ಮುಸ್ಬಾ, ಕಾರ್ಯದರ್ಶಿ ಸಿಎ ಪ್ರಸನ್ನ ಶೆಣೈ ಎಂ, ಖಜಾಂಚಿ, ಸಿಎ ಗೌತಮ್ ನಾಯಕ್, ಹಾಗೂ ಮಂಗಳೂರು ಶಾಖೆಯ ಸಿಕಾಸ ಅಧ್ಯಕ್ಷ ಸಿಎ ಗೌತಮ್ ಪೈ ಉಪಸ್ಥಿತರಿದ್ದರು.ಮಾಜಿ ಅಧ್ಯಕ್ಷರಾದ ಸಿಎ ನಿತಿನ್ ಶೆಟ್ಟಿ, ಸಿಎ ಮುರಳಿಮೋಹನ್, ಸಿಎ ಪ್ರವೀಣ್ ಶೆಟ್ಟಿ, ಸಿಎ ಜಗನ್ನಾಥ ಕಾಮತ್ ಹಾಗೂ ಇತರ ಸಿಎ ಸದಸ್ಯರು ಉಪಸ್ಥಿತರಿದ್ದರು
“ಸ್ವರ್ಣ ಪರ್ವ “ ರಾಷ್ಟ್ರೀಯ ಸಮ್ಮೇಳನದ ಎರಡನೇ ದಿನದಂದು, ಸಿಎ ಕಪಿಲ್ ಗೋಯೆಲ್ ಹಾಗೂ ಸಿಎ ಗುರುಮೂರ್ತಿ ಯವರು ವಿವಿಧ ವಿಷಯಗಳ ಬಗ್ಗೆ ಮಾಹಿತಿಪೂರ್ಣ ಕಾರ್ಯಾಗಾರವನ್ನು ಪ್ರಸ್ತುತ ಪಡಿಸಿದರು. ಈ ಕಾರ್ಯಾಗಾರಕ್ಕೆ ಕಾಸರಗೋಡು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆ ಹಾಗೂ ದೇಶ ವಿದೇಶಗಳಿಂದ ಅನೇಕ ಸಿಎ ಸದಸ್ಯರು ಹಾಗೂ ವಿಧ್ಯಾರ್ಥಿಯರು, ವರ್ಚುಯಲ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಆಗಸ್ಟ್ 20 ರಂದು ನಡೆಯುವ ಸಮಾರೋಪ – ಸಮಾರಂಭಕ್ಕೆ ಶ್ರೀ ಬಿ. ಯೋಗೀಶ್ ಆಚಾರ್ಯ , ಜಿ ಎಮ್, ಕೆನರಾ ಬ್ಯಾಂಕ್ ವೃತ್ತ ಕಚೇರಿ, ಮಂಗಳೂರು, ಸಿಎ ಡಿ. ಬಿ. ಮೆಹತಾ, ಉಪಾಧ್ಯಕ್ಷ, ಕ್ರೆಡೈ , ಕರ್ನಾಟಕ ರಾಜ್ಯ ಕೌನ್ಸಿಲ್, ಶ್ರೀ . ರಾಜೇಶ್ ಗುಪ್ತಾ, ಡಿ. ಜಿ. ಎಂ, ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ , ಮಂಗಳೂರು, ಶ್ರೀ ಮಹೇಶ್ ಜೆ , ಪ್ರಾದೇಶಿಕ ಮುಖ್ಯಸ್ಥರು, ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾ, ಮಂಗಳೂರು, ಹಾಗೂ ಸಿಎ ಕೋಥಾ ಎಸ್. ಶ್ರೀನಿವಾಸ್, ನಿಕಟ ಪೂರ್ವ ಅಧ್ಯಕ್ಷ, ಎಸ್.ಐ.ಆರ್.ಸಿ ಒಫ್ ಐಸಿಎಐ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಮಾರೋಪ – ಸಮಾರಂಭದ ಕಾರ್ಯಕ್ರಮದಲ್ಲಿ ಸಿಎ ಎಂ. ಜಿ. ರಾಮಚಂದ್ರ ಮೂರ್ತಿ, ಸಿಎ ಪ್ರಕಾಶ್ ಬಾಸ್ರಿ, ಸಿಎ ಶ್ರೀರಾಮುಲು ನಾಯ್ಡು, ಸಿಎ ಡಿ. ಬಿ. ಮೆಹ್ತಾ, ಸಿಎ ಅನಂತೇಶ್ ಪ್ರಭು ಹಾಗೂ ಸಿಎ ಎ ಕೆ ಅನಂತ್ ಶೆಣೈ ಅವರನ್ನು ಸನ್ಮಾನಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಐವತ್ತು ವರ್ಷಗಳಿಂದ ಸಿಎ ಕ್ಷೇತ್ರದಲ್ಲಿ ಸೇವೆ ನೀಡಿದವರನ್ನು ಸಹ ಸನ್ಮಾನಿಸಲಾಗುವುದು .