ರೋಟರಿ ಶಂಕರಪುರ ವತಿಯಿಂದ ಆರ್ಥಿಕವಾಗಿ ಹಿಂದುಳಿದ 50 ವಿದ್ಯಾರ್ಥಿಗಳಿಗೆ 50000 ರೂ. ವೆಚ್ಚದ ಉಚಿತ ಶೈಕ್ಷಣಿಕ ಪರಿಕರಗಳ ವಿತರಣೆ..!

ಕಾಪು : ರೋಟರಿ ಶಂಕರಪುರದ ವತಿಯಿಂದ ಡಾ. ಸತೀಶ್ ಶೆಟ್ಟಿ ಮಣಿಪಾಲ್ ಇವರ ಪ್ರಾಯೋಜಕತ್ವದಲ್ಲಿ ಅವರು ಕಲಿತ ಶಾಲೆ ಶಂಕರಪುರ ಸೈ0ಟ್ ಜೋನ್ಸ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕನ್ನಡ ಮಾಧ್ಯಮದ ಆರ್ಥಿಕವಾಗಿ ಹಿಂದುಳಿದ 50 ವಿದ್ಯಾರ್ಥಿಗಳಿಗೆ 50000 ರೂ. ವೆಚ್ಚದ ಉಚಿತ ಶೈಕ್ಷಣಿಕ ಪರಿಕರಗಳ ವಿತರಣೆಯನ್ನು ರೋಟರಿ ಭವನದಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ರವೀಂದ್ರ ಶೆಟ್ಟಿ ನಿವೃತ್ತ ದೈಹಿಕ ಶಿಕ್ಷಕರು ಇನ್ನಂಜೆ, ವಲಯ 5 ರ ವಲಯ ಸೇನಾನಿ ಅನಿಲ್ ಡೇಸಾ, ರೋಟರಿ ಶಂಕರಪುರ ಅಧ್ಯಕ್ಷರು ಆದ ಪ್ಲಾವಿಯಾ ಮೆನೆಜಸ್, ಈ ಪ್ರಾಯೋಜಕತ್ವಕ್ಕೆ ಸಹಕಾರ ನೀಡಿದ ಆಂಟನಿ ಡೇಸಾ, ಪ್ರಾಜೆಕ್ಟ್ ಡೈರೆಕ್ಟರ್ ಆದ ಲಕ್ಷ್ಮಣ ಪೂಜಾರಿ, ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ, ಕಾರ್ಯದರ್ಶಿ ಮಾಲಿನಿ ಇನ್ನಂಜೆ, ನಂದನ್ ಕುಮಾರ್, ವಿಕ್ಟರ್ ಮಾರ್ಟಿಸ್, ಚಂದ್ರ ಪೂಜಾರಿ, ಕ್ಲಿಫರ್ಡ್ ಡಿ ಮೆಲ್ಲೊ, ವಲೇರಿಯನ್ ನೊರೊನ್ನಾ, ವಿಕ್ಟರ್ ಮೆಂಡೋನ್ಸಾ ಉಪಸ್ಥಿತರಿದ್ದರು.