
ಉಡುಪಿ: ಗದ್ದೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಪರ್ಕಳದ ಪರೀಕದಲ್ಲಿ ಸಂಭವಿಸಿದ
ಸೋಮನಾಥ ಶೆಟ್ಟಿ ಗಂಭೀರ ಗಾಯಗೊಂಡವರು. ಇಂದು ಬೆಳಿಗ್ಗೆ ಸೋಮನಾಥ ಶೆಟ್ಟಿ ಅವರು ಮಗನೊಂದಿಗೆ ನಾಗಬನಕ್ಕೆ ತನು ಹಾಕಲೆಂದು ಗದ್ದೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಸಂದರ್ಭ ಸಿಡಿಲು ಬಡಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.