ಕರಾವಳಿ

ಐಸಿಎಐ ಮಂಗಳೂರು ಶಾಖೆಯ “ಸ್ವರ್ಣ ಪರ್ವ” ರಾಷ್ಟ್ರೀಯ ಸಮ್ಮೇಳನದಲ್ಲಿ ಸಿಎ ದಿಗ್ಗಜರಿಗೆ ಗೌರವ ..!

ಐಸಿಎಐ ಮಂಗಳೂರು ಶಾಖೆಯಲ್ಲಿ ನಡೆಯುತ್ತಿರುವ ಸುವರ್ಣ ಮಹೋತ್ಸವ – “ಸ್ವರ್ಣ ಪರ್ವ” ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ಇಂದು (20-08-2021) ಜರಗಿತು. ಶ್ರೀ ಯೋಗೀಶ್ ಬಿ ಆಚಾರ್ಯ, ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್, ಮಂಗಳೂರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮುಖ್ಯ ಅಥಿತಿಗಳಾಗಿ ಸಿಎ ಡಿ ಬಿ ಮೆಹ್ತಾ, ಉಪಾಧ್ಯಕ್ಶರು- ದಕ್ಷಿಣ, ಕ್ರೆಡೈ ಕರ್ನಾಟಕ ರಾಜ್ಯ ಕೌನ್ಸಿಲ್ ; ಶ್ರೀ ರಾಜೇಶ್ ಗುಪ್ತ, ಡಿಜಿಎಂ(ಬಿ & ಒ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ; ಶ್ರೀ ಮಹೇಶ್ ಜೆ , ಪ್ರಾದೇಶಿಕ ಅಧ್ಯಕ್ಶರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿ, ಮಂಗಳೂರು ಹಾಗು ಸಿಎ ಕೊಥ ಎಸ್ ಶ್ರೀನಿವಾಸ್, ಎಸ್ ಐ ಆರ್ ಸಿ ಮಾಜಿ ಅಧ್ಯಕ್ಷರು ಉಪಾಸ್ಥಿತರಿದ್ದರು.

ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸಿಎ ವೃತ್ತಿಯಲ್ಲಿ ೫೦ ವರುಷಗಳ ಸೇವೆ ಸಲ್ಲಿಸಿದ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರನ್ನು ಗೌರವಿಸಲಾಯಿತು.

ಸಿಎ ಪಾಲ್ ವರ್ಗಿಸ್, ಸಿಎ ಗೋಪಾಲ್ ಬಿ ಶೆಟ್ಟಿ , ಸಿಎ ಯು ಕೆ ನಾಯಕ್, ಸಿಎ ರಾಮ ಭಟ್ ಹಾಗು ಸಿಎ ಬಿ ನರಸಿಂಹ ಪೈ (ಎಡದಿಂದ)

Felicitation of senior Chartered accountants of Mangaluru Branch

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಿಎ ಗಳಿಗೆ ಸನ್ಮಾನ ಮಾಡಲಾಯಿತು. ಸಿಎ ಎಂ ಜಿ ರಾಮಚಂದ್ರ ಮೂರ್ತಿ, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182ರ ಡಿಸ್ಟ್ರಿಕ್ಟ್ ಗವರ್ನರ್, ಸಿಎ ಪ್ರಕಾಶ್ ಬಾಸ್ರಿ, ಮಾಜಿ ಅಧ್ಯಕ್ಷರು, ಮಂಗಳೂರು ಶಾಖೆ; ಸಿಎ ಶ್ರೀರಾಮುಲು ನಾಯ್ಡು, ಹಿರಿಯ ಲೆಕ್ಕ ಪರಿಶೋಧಕರು; ಸಿಎ ಡಿ ಬಿ ಮೆಹ್ತಾ, ಉಪಾಧ್ಯಕ್ಶರು- ದಕ್ಷಿಣ, ಕ್ರೆಡೈ ಕರ್ನಾಟಕ ರಾಜ್ಯ ಕೌನ್ಸಿಲ್; ಸಿಎ ಅನಂತೇಶ್ ಪ್ರಭು, ಅರುಣಾ ಇಂಡಸ್ಟ್ರೀಸ್ ಪಾಲುದಾರರು ಹಾಗು ಸಿಎ ಎ ಕೆ ಅನಂತ್ ಶೆಣೈ ಇವರನ್ನು ಗೌರವಿಸಲಾಯಿತು.

Felicitation of CAs for exemplary contribution in various fields

ಈ ಸಂದರ್ಭದಲ್ಲಿ ಮಂಗಳೂರು ಐಸಿಎಐ ಶಾಖೆಯ ಅಧ್ಯಕ್ಷರಾದ ಸಿಎ ಕೆ. ಎಸ್. ಕಾಮತ್, ಉಪಾಧ್ಯಕ್ಷರಾದ , ಸಿಎ ಅಬ್ದುರ್ ರೆಹಮಾನ್ ಮುಸ್ಬಾ, ಕಾರ್ಯದರ್ಶಿ ಸಿಎ ಪ್ರಸನ್ನ ಶೆಣೈ ಎಂ, ಖಜಾಂಚಿ, ಸಿಎ ಗೌತಮ್ ನಾಯಕ್, ನಿಕಟಪೂರ್ವ ಅಧ್ಯಕ್ಷರಾದ ಸಿಎ ಎಸ್ ಎಸ್ ನಾಯಕ್, ಮಂಗಳೂರು ಶಾಖೆಯ ಸಿಕಾಸ ಅಧ್ಯಕ್ಷ ಸಿಎ ಗೌತಮ್ ಪೈ ಉಪಸ್ಥಿತರಿದ್ದರು.ಮಾಜಿ ಅಧ್ಯಕ್ಷರಾದ ಸಿಎ ಭಾರ್ಗವ ತಂತ್ರಿ , ಸಿಎ ಶಿವಾನಂದ ಪೈ , ಸಿಎ ಬಿ ಚಂದ್ರಕಾಂತ್ ರಾವ್ ಹಾಗು ಇತರ ಸಿಎ ಸದಸ್ಯರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker