ಕರಾವಳಿ
ಉಡುಪಿ: ಜಿಲ್ಲೆಯಲ್ಲಿ ಸದ್ಯ ಶಾಲೆ ಆರಂಭಿಸುವುದಿಲ್ಲ: ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್..!

ಉಡುಪಿ: ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಸೋಮವಾರದಿಂದ ಶಾಲೆ ಆರಂಭ ಮಾಡುವುದಾಗಿ ಸರಕಾರ ಪ್ರಕಟಿಸಿತ್ತು.
ಆದರೆ ಇದಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ
ಉಡುಪಿ ಜಿಲ್ಲೆಯಲ್ಲಿ ಸದ್ಯ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ.೨ ಕ್ಕಿಂತ ಹೆಚ್ಚಿದೆ.ಜಿಲ್ಲೆಯ ಸದ್ಯದ ಪಾಸಿಟಿವಿಟಿ ೨.೫% ಇದೆ.
ಪಾಸಿಟಿವಿಟಿ ರೇಟ್ ಶೇ.೨ ಕ್ಕಿಂತ ಕಡಿಮೆಯಾದ ಬಳಿಕವೇ ಶಾಲೆ ಆರಂಭಿಸುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ಕೊಟ್ಟಿದ್ದಾರೆ.