ರಾಷ್ಟ್ರೀಯ

ಅಪ್ಘಾನಿಸ್ತಾನದಿಂದ ಜನರನ್ನು ಏರ್ ಲಿಫ್ಟ್ ಮಾಡಿದ ಭಾರತ

ನವದೆಹಲಿ: ಅಪ್ಘಾನಿಸ್ತಾನದಿಂದ ಭಾರತ ೧೬೮ ಜನರನ್ನು ಏರ್ ಲಿಫ್ಟ್ ಮಾಡಿದೆ. ಇದರಲ್ಲಿ ೧೦೭ ಮಂದಿ ಭಾರತೀಯರಾಗಿದ್ದಾರೆ. ಉಳಿದವರು ಭಾರತದ ಮಿತ್ರ ದೇಶಗಳ ನಾಗರಿಕರಾಗಿದ್ದಾರೆ.

ಇದೀಗ ವಾಯುಪಡೆಯ ಸಿ- ೧೭ ವಿಮಾನ ಗಾಜಿಯಾಬಾದ್ ನಲ್ಲಿರುವ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ.

ಪ್ರಯಾಣಿಕರನ್ನು ದೆಹೆಲಿಗೆ ಕರೆದೊಯ್ದ ಬಳಿಕ ಅವರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

ಪ್ರತಿದಿನ ಎರಡು ವಿಮಾನಗಳ ಹಾರಾಟಕ್ಕೆ ಭಾರತಕ್ಕೆ ಅನುಮತಿ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!