ಉಡುಪಿ : ಕೂಲಿ ಕಾರ್ಮಿಕ ಯುವಕರಿಬ್ಬರೂ, ನೀರಿಗೆ ಬಿದ್ದು ಸಾವು

ಉಡುಪಿ : ಕೃಷಿ ಕಾರ್ಮಿಕ ಯುವಕರಿಬ್ಬರೂ ನದಿಗೆ ಬಿದ್ದು ಸಾವನ್ನಪ್ಪಿದ ಧಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಲ್ಬಾಡಿ ಗ್ರಾಮದಲ್ಲಿ ಆ 23 ರಂದು ನಡೆದಿದೆ.
ಅಲ್ಬಾಡಿ ಗ್ರಾಮದ ಮೋಹನ್ ನಾಯಕ್ (೨೧) ಮತ್ತು ಮಹಾಬಲ ನಾಯ್ಕ್ ಅವರ ಮಗ ಸುರೇಶ್ (೧೯) ಮೃತಪಟ್ಟ ಯುವಕರು. ಇವರು ಅಲ್ಬಾಡಿ ಗ್ರಾಮದ ಗಂಟುಬೀಲು ಕೃಷ್ಣ ನಾಯಕ್ ಎಂಬವರ ತೋಟದಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಿದ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸೋಮವಾರ ಕೃಷ್ಣ ನಾಯಕ್ ರವರ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಇಬ್ಬರೂ ಬಹಳ ಹೊತ್ತು ಕಳೆದರೂ ವಾಪಸ್ಸು ಹಿಂದುರುಗದ ಹಿನ್ನಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಇಬ್ಬರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.
ಮೃತಪಟ್ಟ ಯುವಕರಿಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದು, ಮೋಹನ್ ನಾಯ್ಕ್ ತನ್ನ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ ಮತ್ತು ಸುರೇಶ್ ನಾಯ್ಕ್ ಪೋಷಕರು ಮತ್ತು ಸಹೋದರನನ್ನು ಅಗಲಿದ್ದಾರೆ.ಇಬ್ಬರು ಯುವಕರು ಬಡ ಕುಟುಂಬಕ್ಕೆ ಸೇರಿದವರಾಗಿದ್ದೂ ತಮ್ಮ ತಮ್ಮ ಕುಟುಂಬದ ಅಧಾರ ಸ್ಥಂಬಗಳಾಗಿದ್ದರು