ಕರಾವಳಿ

ಮುಖ್ಯಮಂತ್ರಿಗಳಿಂದ ಪಡೆದ ಚಿನ್ನದ ಪದಕ ಪ್ರಶಸ್ತಿ ಮೊತ್ತವನ್ನು ಬಾಲಕಿಯ ಚಿಕಿತ್ಸೆಗೆ ಸಹಾಯ ಮಾಡಿದ ಶಂಕರ್ ಪೂಜಾರಿ ಕಾಡಿನತಾರು

ಕುಂದಾಪುರ: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಕಾಡಿನತಾರು ಅವರು ಮುಖ್ಯಮಂತ್ರಿ ಚಿನ್ನದ ಪದಕದೊಂದಿಗೆ ಪಡೆದ ೧೦,೦೦೦ ರೂ. ಮೊತ್ತವನ್ನು ವಿಲ್ಸ್‌ನ್ ಡಿಸೀಸ್ ಖಾಯಿಲೆಯಿಂದ ಬಳಲುತ್ತಿರುವ ಕೋಟದ ಬಾಲಕಿಯ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಗೆ ಮಂಗಳವಾರ ಹಸ್ತಾಂತರಿದರು.

ಈ ಸಂದರ್ಭ ಕೋಟ ಅಮೃತೇಶ್ವರಿ ದೇವಸ್ಥಾನದ ಮೆನೇಜರ್ ಗಣೇಶ್ ಹೊಳ್ಳ, ಮಗುವಿನ ಅಜ್ಜಿ, ಅರ್ಚಕರಾದ ಅಮೃತ್ ಜೋಗಿ, ಪಡುಕೆರೆ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಉಪಸ್ಥಿತರಿದ್ದರು.

ಬಾಲಕಿಯ ಚಿಕಿತ್ಸೆಗೆ ಬೇಕಿದೆ ನೆರವು
ಕೋಟ ಅಮೃತೇಶ್ವರಿ ದೇವಸ್ಥಾನದ ಸಮೀಪ ವಾಸಿಸುತ್ತಿರುವ ದಾಮೋದರ ಹಾಗೂ ದೀಕ್ಷಾ ದಂಪತಿಗಳ ಪುತ್ರಿ ಮಾನ್ಯ ಜೋಗಿ (೬) ವಿಲ್ಸ್‌ನ್ ಡಿಸೀಸ್‌ನಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಟರ್ ಇಂಟಿಗ್ರೆಟೆಡ್ ಲಿವರ್ ಕೇರ್ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿದಾಗ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಯ ಅಗತ್ಯವಿರುದಾಗಿ ತಿಳಿಸಿದ್ದಾರೆ.

ಚಿಕಿತ್ಸೆಗೆ ಸುಮಾರು ೧೫ ರಿಂದ ೨೦ ಲಕ್ಷ ರೂ. ಹಣದ ಅವಶ್ಯಕತೆಯಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ೧೫ ದಿನಗಳ ಒಳಗೆ ಭರಿಸುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಸಹೃದಯಿಗಳು ತಮ್ಮ ಕೈಲಾದ ನೆರವು ನೀಡಿ ಮಗುವಿನ ಚಿಕಿತ್ಸೆ ಸಹಕರಿಸುವಂತೆ ಕುಟುಂಬಿಕರು ಕೋರಿಕೊಂಡಿದ್ದಾರೆ.

ಬ್ಯಾಂಕ್ ಖಾತೆ ವಿವರ: ಯೂನಿಯನ್ ಬ್ಯಾಂಕ್
ಖಾತೆ ಹೆಸರು: ದೀಕ್ಷಾ
ಖಾತೆ ಸಂಖ್ಯೆ: 520101235298065
ಐಎಫ್‌ಎಸ್‌ಸಿ ಕೋಡ್: UBIN0901784
ಪೋನ್ ಪೇ: 7090910240
ಮೊಬೈಲ್ ಸಂಖ್ಯೆ: 9448529923, 7760862617

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker