ರಾಜ್ಯ
ಪುತ್ತೂರು: ರಿಕ್ಷಾಗೆ ಕಾರು ಡಿಕ್ಕಿ ರಿಕ್ಷಾ ಚಾಲಕನಿಗೆ ತೀವ್ರಗಾಯ..!

ಪುತ್ತೂರು ಮತ್ತು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರದಲ್ಲಿ ಜ.26ರಂದು ಬೆಳಿಗ್ಗೆ ಆಟೋ ರಿಕ್ಷಾಕ್ಕೆ ಕಾರೊಂದು ಡಿಕ್ಕಿಯಾದ ಘಟನೆ ನಡೆದಿದೆ.
ಅಪಘಾತದಿಂದ ಆಟೋ ರಿಕ್ಷಾ ಚಾಲಕ ಪಡೀಲ್ ನಿವಾಸಿ ಗಾಯಗೊಂಡಿದ್ದಾರೆ.ಪುತ್ತೂರು ಕಡೆ ಬರುತ್ತಿದ್ದ ಆಟೋ ರಿಕ್ಷಾ ಕೃಷ್ಣನಗರ ಚರ್ಚ್ ಬಳಿ ಪ್ರಯಾಣಿಕರಿಗಾಗಿ ನಿಲ್ಲಿಸಿದ ವೇಳೆ ರಿಕ್ಷಾದ ಹಿಂಬದಿಯಿಂದ ಬರುತ್ತಿದ್ದ ಕಾರೊಂದು ರಿಕ್ಷಾಕ್ಕೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಕಮರಿಗೆ ಬಿದ್ದು, ಚಾಲಕನಿಗೆ ತೀವ್ರ ಗಾಯವಾಗಿದೆ. ಗಾಯಗೊಂಡ ಚಾಲಕನನ್ನು ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.