ರಾಜ್ಯ
ವ್ಯಾಕ್ಸಿನ್ ಇಂದೇ ಹಾಕಿಸಿಕೊಳ್ಳಿ !! ಸೆ.1 ರಿಂದ ವಾಕ್ಸಿನ್ ಪಡೆದ ಪ್ರಮಾಣಪತ್ರ ಇಲ್ಲದವರಿಗೆ ದಂಡ ಹಾಕಲಿದೆ ಆರೋಗ್ಯ ಇಲಾಖೆ

ದೇಶಾದ್ಯಂತ ಜನತೆ ಮಾಸ್ಕ್ ಹಾಕದೇ ಫೈನ್ ಕಟ್ಟಿರುವುದು, ಒದೆ ತಿಂದಿರುವುದು ಎಲ್ಲರಿಗೂ ತಿಳಿದ ವಿಚಾರ.ಆದರೆ ಇನ್ನು ಹೊಸ ಕಾನೂನು ಬರಲಿದ್ದು ಮಾಸ್ಕ್ ಜೊತೆಗೆ ವಾಕ್ಸಿನ್ ಹಾಕಿಸಿಕೊಳ್ಳದಿದ್ದವರಿಗೆ ದಂಡ ಬೀಳಿಲಿದೆ.
ಮಹಾಮಾರಿಯ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದ್ದು,ಅಲ್ಲಲ್ಲಿ ವಾಕ್ಸಿನ್ ಕೊಡುವ ಕ್ಯಾಂಪ್ ಕೂಡಾ ನಡೆಸುತ್ತಿದೆ.ಆದರೆ,ಅದ್ಯಾವುದನ್ನು ಅರಿಯದ ಜನತೆ ವಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವುದರಿಂದ ಸೆಪ್ಟೆಂಬರ್ ಒಂದರಿಂದ ವಾಕ್ಸಿನ್ ಹಾಕಿಸಿಕೊಳ್ಳದವರಿಗೆ ದಂಡ ಹಾಕುವ ಯೋಜನೆಯನ್ನು ಕೈಗೊಂಡಿದೆ.
ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಖಾಸಗಿ ಸಂಸ್ಥೆಗಳು, ಹೋಟೆಲ್, ಮಾಲ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ವಾಕ್ಸಿನ್ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು. ಇದೇ 31 ರ ಒಳಗಾಗಿ ಮೊದಲ ಡೋಸ್ ಪಡೆಯದಿದ್ದರೆ ದಂಡ ಬೀಳಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.