
ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ನೂತನ ದಾಖಲೆ ನಿರ್ಮಿಸಿದ್ದು ಒಂದೇ ದಿನ ಒಂದು ಕೋಟಿಗಿಂತ ಹೆಚ್ಚು ಡೋಸ್ ಲಸಿಕಾಕರಣ ನಡೆದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದಾರೆ.
ಆಗಸ್ಟ್ ೨೭ ರಂದು ದೇಶಾದ್ಯಂತ ಬ್ರಹತ್ ಲಸಿಕಾ ಮೇಳ ನಡೆದಿದ್ದು ಒಟ್ಟು ೧,೦೦,೬೩,೯೩೧ ಡೋಸ್ ಲಸಿಕೆ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ೨೮,೬೨,೬೪೯ ಡೋಸ್ ಲಸಿಕಾಕರಣ ನಡೆದಿದ್ದು, ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ರಾಜ್ಯದಲ್ಲಿ ಶುಕ್ರವಾರ ಒಟ್ಟು ೧೦,೭೯,೫೮೮ ಡೋಸ್ ಲಸಿಕೆ ನೀಡಲಾಗಿದೆ. ಮೂರನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ೯,೮೪,೧೧೭ ಡೋಸ್ ಲಸಿಕಾಕರಣ ನಡೆದಿದೆ.
ಹರ್ಷ ವ್ಯಕ್ತಪಡಿಸಿದ ಗೃಹ ಸಚಿವ ಅಮಿತ್ ಶಾ:
ಕೇವಲ ಒಂದೇ ದಿನದಲ್ಲಿ ಕೋಟಿ ಡೋಸ್ ಲಸಿಕೆ! ಈ ಅಂಕಿ ಅಂಶವು ನವಭಾರತದ ಬಲವಾದ ಇಚ್ಛಾಶಕ್ತಿ ಮತ್ತು ಅಪಾರ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ಒಂದು ದೇಶವು ಹೇಗೆ ದೂರದೃಷ್ಟಿಯ ಮತ್ತು ಪರಿಶ್ರಮದ ನಾಯಕತ್ವದೊಂದಿಗೆ ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಡುವಲ್ಲಿ ಒಂದು ಉದಾಹರಣೆಯನ್ನು ನೀಡಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಜಗತ್ತಿಗೆ ತೋರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.