
ಬೀಜಿಂಗ್: ತೆರಿಗೆ ವಂಚನೆ ಎಸಗಿದ ಆರೋಪದ ಮೇಲೆ ಚೀನಾದ ಖ್ಯಾತ ನಟಿಗೆ 299 ದಶಲಕ್ಷ ಯುವಾನ್ (340 ಕೋಟಿ ರೂ.) ದಂಡ ವಿಧಿಸಲಾಗಿದೆ.
ನಟಿ ಜೆಂಗ್ ಶುವಾಂಗ್ ಸಿನಿಮಾ ಮೂಲಕ ಭಾರೀ ಹಣ ಸಂಪಾದಿಸಿದ್ದರೂ ಈ ವಿಚಾರವನ್ನು ರಹಸ್ಯವಾಗಿ ಇಟ್ಟಿದ್ದರು.
ಈ ವಿಚಾರವನ್ನು ನಟಿಯ ಮಾಜಿ ಗಂಡ ಬಹಿರಂಗಪಡಿಸಿದ್ದು, ತನಿಖೆ ನಡೆಸಿದ ಅಧಿಕಾರಿಗಳು ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ.
2019-20ರ ಅವಧಿಯಲ್ಲಿ ತೆರಿಗೆ ಉಲ್ಲಂಘಿಸಿದ ಆರೋಪಕ್ಕೆ 30 ವರ್ಷದ ನಟಿ ಜೆಂಗ್ ಶುವಾಂಗ್ ಒಳಗಾಗಿದ್ದಾರೆ. 2009ರಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ್ದ ಜೆಂಗ್ ನಂತರ ಚೀನಾದ ಮನೆ ಮಾತಾಗಿದ್ದರು.
ಇನ್ನು ಮುಂದೆ ಸಿನಿಮಾ, ಧಾರಾವಾಹಿಗಳಲ್ಲಿ ಜೆಂಗ್ ಅವರಿಗೆ ಯಾವುದೇ ಅವಕಾಶ ನೀಡಬಾರದು ಎಂದು ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ತೆರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.