
ಉಪ್ಪುಂದದಲ್ಲಿ ಇಂದು ಎಡೆಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯನ್ನು ಸಹ ಲೆಕ್ಕಿಸದೇ ಅಕ್ಷಯ ಕಿರಣದ ಸೇವಾದಾರರು 90ನೇ ಸೇವಾಯಜ್ಞ ವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದರು.
ಮೊನ್ನೆ ತಾನೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ತೆರನಾಗಿ ಗಾಯಗೊಂಡು ಉಡುಪಿಯ ಆದರ್ಶ ಆಸ್ಪತ್ರೆಯ ತೀರ್ವ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಪ್ಪುಂದದ
ಹೊಳೆಬಾಗಿಲಿನ ಕೇಶವ ದೇವಾಡಿಗರ ಮನೆಗೆ ತೆರಳಿ ವೈದ್ಯಕೀಯ ಖರ್ಚು ವೆಚ್ಚಕ್ಕೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಅವರ ಮನೆಗೆ ತೆರಳಿ 20ಸಾವಿರ ರೂಪಾಯಿಯನ್ನು ನೀಡಿ, ಆ ಮನೆಯವರಿಗೆ ನಮ್ಮ ಸಮಾಜ ನಿಮ್ಮ ಜೊತೆ ಇದೆ ಎಂಬ ನೈತಿಕ ಸ್ಥೈರ್ಯವನ್ನು ತುಂಬಿದರು.
ಈ ಸೇವಾ ಯಜ್ಞದಲ್ಲಿ ದೇವಾಡಿಗ ಅಕ್ಷಯ ಕಿರಣ ಸೇವಾ ಪೌ0ಡೇಷನ್ ಇದರ ಸೇವಾದಾರರಾದ ಶ್ರೀ ಭರತ್ ದೇವಾಡಿಗ, ಶ್ರೀ ಮಹಾಲಿಂಗ ದೇವಾಡಿಗ, ಶ್ರೀ ಮಧುಕರ್ ದೇವಾಡಿಗ, ಶ್ರೀ ನಾಗೇಂದ್ರ ದೇವಾಡಿಗ, ಶ್ರೀ ಮಂಜುನಾಥ್ ದೇವಾಡಿಗ, ಶ್ರೀ ಪುರುಷೋತ್ತಮ ದಾಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಕ್ಷಯ ಕಿರಣದ ಸರ್ವ ಮಹಾಪೋಷಕರು, ಪೋಷಕರು ಹಾಗೂ ಸರ್ವ ಸೇವಾದಾರರನ್ನು ಸ್ಮರಿಸಲಾಯಿತು. ಅವರೆಲ್ಲರ ತನು-ಮನ-ಧನದ ಸಹಕಾರದಿಂದ ಮತ್ತು ಅವರ ಸೇವಾ ಮನೋಭಾವದ ಕಾರ್ಯದಿಂದ ಇಂದು ಅಕ್ಷಯ ಕಿರಣದ ಹೆಸರು ಜಗದಗಲಕ್ಕೆ ಪಸರಿಸಲು ಸಾಧ್ಯವಾಯಿತು..