
ಸೌದಿ ಅರೇಬಿಯದ ಅಭಾ ವಿಮಾನ ನಿಲ್ದಾಣದಲ್ಲಿ ಸಿಡಿ ಮದ್ದು ತುಂಬಿದ ಡ್ರೋನ್ ದಾಳಿ ನಡೆದಿದೆ. ಘಟನೆಯಲ್ಲಿ , 8 ಮಂದಿ ಗಾಯಗೊಂಡಿದ್ದು, ವಿಮಾನಕ್ಕೆ ಹಾನಿಗೀಡಾಗಿದೆ ಎಂದು ವರದಿ ತಿಳಿಸಿದೆ.
24 ಗಂಟೆಗಳಲ್ಲಿ ಇದು ಎರಡನೇ ದಾಳಿಯಾಗಿದೆ.
ತಕ್ಷಣಕ್ಕೆ ಸರ್ಕಾರ ಡ್ರೋನ್ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯೆಮೆನ್ ನಲ್ಲಿ ಯುದ್ಧನಿರತವಾಗಿರುವ ಸೌದಿ ಅರೇಬಿಯಾದಲ್ಲಿ ಈ ಘಟನೆ ನಡೆದಿದೆ.