ರಾಷ್ಟ್ರೀಯ

8 ತಿಂಗಳು ಹೋಟೆಲ್‌ನಲ್ಲಿ ವಾಸ್ತವ್ಯ: ಬಿಲ್ ಪಾವತಿಸದೆ ಬಾತ್ ರೂಮಿಂದ ಪರಾರಿ!

ವ್ಯಕ್ತಿಯೊಬ್ಬ ಆತನ ಮಗನೊಂದಿಗೆ ಹೋಟೆಲ್‌ನಲ್ಲಿ ಸುಮಾರು 8 ತಿಂಗಳುಗಳ ಕಾಲ ತಂಗಿದ್ದು, ಬಳಿಕ 25 ಲಕ್ಷ ರೂಪಾಯಿ ಬಿಲ್ ಪಾವತಿಸದೇ ಪರಾರಿಯಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

45 ವರ್ಷದ ಆರೋಪಿಯನ್ನು ಮುಂಬೈಯ ಅಂಧೇರಿ ನಿವಾಸಿ ಎಂದು ಗುರುತಿಸಲಾಗಿದೆ. ಆತ ತನ್ನ 12 ವರ್ಷದ ಮಗನೊಂದಿಗೆ 8 ತಿಂಗಳ ಹಿಂದೆ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ್ದ.

ತಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೊಟೇಲ್ ಸಿಬ್ಬಂದಿಗೆ ಹೇಳಿ ಕೊಠಡಿಯನ್ನು ಕಾಯ್ದಿರಿಸಿದ್ದ ಎಂದು ತಿಳಿದುಬಂದಿದೆ. ಇದೀಗ ಆತ ತನ್ನ ಮಗನೊಂದಿಗೆ ಬಾತ್ ರೂಂ ಕಿಟಕಿಯಿಂದ ಪರಾರಿಯಾಗಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!