
ಬೆಂಗಳೂರು, (ಸೆ.04): ನಿಜವಾದ ಸುದ್ದಿಗಿಂತ ಸುಳ್ಳು ಸುದ್ದಿಯೇ ಬೇಗ ಎಲ್ಲರಿಗೂ ಮುಟ್ಟಿಬಿಡುತ್ತೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದೇ ಆಗಿದ್ದು. ಅಂತಹದ್ದೇ ಒಂದು ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಬಡ ಜನರ ಆತಂಕಕ್ಕೆ ಕಾರಣವಾಗಿದೆ.
ಹೌದು.. ಬೈಕ್, ಫ್ರಿಡ್ಜ್, ಟಿವಿ ಇದ್ದರೂ BPL ಕಾರ್ಡ್ ರದ್ದು ಮಾಡಲಾಗುತ್ತೆ ಎನ್ನುವ ಒಂದು ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದ್ರೆ, ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಬಗ್ಗೆ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಸ್ಪಷ್ಟನೆ ಕೊಟ್ಟಿದೆ.